ನ್ಯೂಸ್

ಸಲ್ಮಾನ್​ ಆಯ್ತು, ಈ ಖ್ಯಾತ ನಿರ್ದೇಶಕನ ಹತ್ಯೆಗೂ ಗ್ಯಾಂಗ್​ಸ್ಟರ್​ ಬಿಷ್ಣೋಯಿ ಸ್ಕೆಚ್: ತನಿಖೆಯಿಂದ ಬಯಲು

ಮುಂಬೈ: ಪಂಜಾಬ್​ ಗಾಯಕನ ಹತ್ಯೆ ಬಳಿಕ ಬಾಲಿವುಡ್​​ ನಟ ಸಲ್ಮಾನ್​ ಖಾನ್​​ ಹತ್ಯೆಗೆ ಸಂಚು ರೂಪಿಸಿದ್ದ ಬಿಷ್ಣೋಯಿ ಲಿಸ್ಟ್​​ನಲ್ಲಿ ಮತ್ತೊಬ್ಬ ಖ್ಯಾತ ನಿರ್ದೇಶಕನ ಹೆಸರು ಇತ್ತು ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ.

ಸಲ್ಮಾನ್​ ಖಾನ್​ಗೆ ಜೀವಬೆದರಿಕೆ ಪತ್ರ ಹಾಗೂ ಪಂಜಾಬ್​ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​​, ಕರಣ್​ ಜೋಹರ್​ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಕರಣ್​ ಜೋಹರ್​​ನನ್ನು ಅಪಹರಿಸಿ 5 ಕೋಟಿ ರೂ. ಬೇಡಿಕೆ ಇಡುವ ಬಗ್ಗೆಯೂ ಈ ಗ್ಯಾಂಗ್​ ಯೋಜನೆ ರೂಪಿಸಿತ್ತು. ಒಂದು ವೇಳೆ ದುಡ್ಡು ಸಿಗಲಿಲ್ಲವೆಂದಾದಲ್ಲಿ ಅವರ ಹತ್ಯೆಗೂ ಯೋಜನೆ ರೂಪಿಸಿದ್ದೇವು ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಒಟ್ಟಾರೆ ಬಾಲಿವುಡ್​ ನಟರ ಮೇಲೆ ಗ್ಯಾಂಗ್​​ಸ್ಟರ್​​ ಲಾರೆನ್ಸ್​ ಬಿಷ್ಣೋಯಿ ತಂಡ ಸಂಚು ರೂಪಿಸಿದ್ದು, ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ನಡುವೆ ಪಂಜಾಬ್​ ಗಾಯಕ ಸಿಧು ಮೂಸೆವಾಲ ಅವರ ಹತ್ಯೆ ಕುರಿತ ತನಿಖೆಯೂ ಚುರುಕುಗೊಂಡಿದೆ. (ಏಜೆನ್ಸೀಸ್​)