ನ್ಯೂಸ್

'ಸ್ಟೂಡೆಂಟ್ ಆಫ್​ ದಿ ಇಯರ್​' ಚಿತ್ರಕ್ಕೆ 12 ವರ್ಷದ ಸಂಭ್ರಮ; ಕಿತ್ತುಬಿಸಾಡಿದ್ದ ಸೀನ್​ ಈಗ ರಿವೀಲ್​! | Karan Johar

ಮುಂಬೈ: ಬಾಲಿವುಡ್​ನ ಹೆಸರಾಂತ ನಿರ್ದೇಶಕ, ನಿರ್ಮಾಪಕ ಕರಣ್​ ಜೋಹರ್ (Karan Johar)​ ನಿರ್ದೇಶನದಲ್ಲಿ ಮೂಡಿಬಂದ ಬ್ಲಾಕ್​​ಬಸ್ಟರ್ 'ಸ್ಟೂಡೆಂಟ್​ ಆಫ್​ ದಿ ಇಯರ್' ಸಿನಿಮಾ​ ತೆರೆಗೆ ​ಬಂದು ಇಂದಿಗೆ 12 ವರ್ಷಗಳು ಕಳೆದಿವೆ. ಈ ಸಂತಸದ ಸುದ್ದಿಯನ್ನು ಸಿನಿಪ್ರಿಯರು ಹಾಗೂ ಅಭಿಮಾನಿಗಳೊಂದಿಗೆ ನಿರ್ದೇಶಕರು ಹಂಚಿಕೊಂಡಿದ್ದಾರೆ.

ಹೊಸ ಅಲೆ ಸೃಷ್ಟಿಸಿತು

ಕರಣ್​ ಅವರ ಚೊಚ್ಚಲ ನಿರ್ದೇಶನದಲ್ಲಿ ಅಕ್ಟೋಬರ್​ 19, 2012ರಂದು ತೆರೆಗೆ ಅಪ್ಪಳಿಸಿದ ಈ ಸಿನಿಮಾ, ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು. ಕೇವಲ ಉತ್ತಮ ಗಳಿಕೆ ಮಾತ್ರವಲ್ಲದೇ, ಜಾಗತಿಕ ಮಟ್ಟದಲ್ಲಿ ಬಾಲಿವುಡ್​ನ ಲವ್​ ಸ್ಟೋರಿಗೆ ವ್ಯಾಪಕ ಮೆಚ್ಚುಗೆಯನ್ನು ಪಡೆದುಕೊಂಡಿತು. ಅಂದು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಕಂಡ ಈ ಚಿತ್ರ, ಯುವಜನತೆಗೆ ಬಹಳ ಹತ್ತಿರವಾಯಿತು. ಕಾರಣ, ಕಾಲೇಜಿನ ಯುವಕ-ಯುವತಿಯ ಮಧ್ಯೆ ನಡೆಯುವ ಪ್ರೀತಿ-ಪ್ರೇಮದ ಕಥೆ. ಇದೀಗ ಸ್ಟಾರ್​ ಡೈರೆಕ್ಟರ್​, ತಮ್ಮ ಯಶಸ್ವಿ ಚಿತ್ರವು ಬಿಡುಗೊಂಡು ಇಂದಿಗೆ 12 ವರ್ಷಗಳು ಕಳೆದಿವೆ ಎಂಬ ಪೋಸ್ಟ್​ವೊಂದನ್ನು ತಮ್ಮ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಕಾಮಿಡಿ ಸೀನ್ ಡಿಲೀಟ್

ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಿಶೇಷ ಪೋಸ್ಟ್ ಹಾಕಿರುವ ಕರಣ್ ಜೋಹರ್, ಸ್ಟೂಡೆಂಟ್​ ಆಫ್​ ದಿ ಇಯರ್​ ಸಿನಿಮಾದಲ್ಲಿ ಡಿಲೀಟ್ ಮಾಡಲಾದ ಒಂದು ಕಾಮಿಡಿ ಸೀನ್​ವೊಂದನ್ನು ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಲ್ಲಿ ಖುಷಿ ನೀಡಿದ್ದೇ ಆದರೂ ಇಂಥ ಒಳ್ಳೆಯ ಕಾಮಿಡಿ ಸೀನ್​ ಅನ್ನು ಏಕೆ ಡಿಲೀಟ್ ಮಾಡಿದ್ರಿ? ಎಂದು ಪ್ರಶ್ನಿಸಿದ್ದಾರೆ.

ರೊಮ್ಯಾಂಟಿಕ್​-ಕಾಮಿಡಿ ಜಾನರ್​ನಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವರುಣ್ ಧವನ್​, ಸಿದಾರ್ಥ್​ ಮಲ್ಹೋತ್ರಾ, ಆಲಿಯಾ ಭಟ್​, ರಿಷಿ ಕಪೂರ್, ಸನಾ ಸಯೀದ್, ರೋನಿತ್ ರಾಯ್, ಸಾಹಿಲ್ ಆನಂದ್, ರಾಮ್ ಕಪೂರ್ ಮತ್ತು ಫರೀದಾ ಜಲಾಲ್ ಸೇರಿದಂತೆ ಮುಂತಾದವರ ತಾರಾಗಣವಿದೆ. ವಿಶಾಲ್-ಶೇಖರ್ ಅವರ ಸಂಗೀತ ಸಂಯೋಜನೆ ಚಿತ್ರದ ಗೆಲುವಿಗೆ ಪ್ರಮುಖ ಕಾರಣವಾಗಿ ಹೊರಹೊಮ್ಮಿತು,(ಏಜೆನ್ಸೀಸ್).