ನ್ಯೂಸ್

VIDEO: ಪೊಲೀಸರ ಅಮಾನವೀಯತೆಗೆ ತನ್ನ ಕಾಲುಗಳನ್ನೇ ಕಳೆದುಕೊಂಡ ಬೀದಿ ಬದಿ ವ್ಯಾಪಾರಿ!

ಕಾನ್ಪುರ: ಬೀದಿ ಬದಿ ವ್ಯಾಪರ ನಡೆಸುವ ವ್ಯಾಪರಿಯೊಬ್ಬ, ರೈಲಿನಡಿ ಸಿಲುಕಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಭೀಕರ ಘಟನೆಯೊಂದು ಕಲ್ಯಾಣಪುರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಗೆ ನೇರ ಕಾರಣ ಪೊಲೀಸರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.

ಹೌದು, ಬೀದಿ ಬದಿ ವ್ಯಾಪಾರಿ ಇರ್ಫಾನ್, ತರಕಾರಿ ಮಾರಾಟ ಮಾಡುತ್ತಿದ್ದ ವೇಳೆ. ರೈಲ್ವೇ ಪೊಲೀಸರು ಆತನ ತಕ್ಕಡಿ ಮುಂತಾದ ವಸ್ತುಗಳನ್ನು ರೈಲ್ವೇ ಹಳಿಯ ಮೇಲೆ ಎಸೆದಿದ್ದಾರೆ. ಇರ್ಫಾನ್ ತನ್ನ ವಸ್ತುಗಳನ್ನು ಸಂಗ್ರಹಿಸಿಕೊಳ್ಳಲು ರೈಲ್ವೇ ಹಳಿಗೆ ಇಳಿದಿದ್ದಾನೆ. ಈ ವೇಳೆ ರೈಲಿನಡಿಗೆ ಇರ್ಫಾನ್ ಸಿಲುಕಿಕೊಂಡಿದ್ದಾನೆ. ಇದಿರಿಂದ ತನ್ನ ಕಾಲುಗಳನ್ನು ಕಳೆದುಕೊಂಡಿದ್ದಾನೆ.

ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪಘಾತ ನಡೆಯುತ್ತಿದ್ದಂತೆ, ರೈಲ್ವೇ ಹಳಿ ಮೇಲೆ ಒದ್ದಾಡುತ್ತಿದ್ದ ಇರ್ಫಾನ್​ನನ್ನು ಪೊಲೀಸ್ ಅಧಿಕಾರಿಯೊಬ್ಬರು ಬಂದು ಸಾರ್ವಜನಿಕರ ಸಹಾಯದಿಂದ ಮೇಲಕ್ಕೆ ಕರೆದುಕೊಂಡು ಬಂದಿದ್ದಾರೆ.

ಇಂದಿರಾ ನಗರ ಪೊಲೀಸ್ ಠಾಣೆಯ ಹೆಡ್​​ಕಾನ್​​ಸ್ಟೇಬಲ್ ಶಾದಾಬ್ ಖಾನ್ ಜಿಟಿ ರಸ್ತೆಯಲ್ಲಿನ ಬೀದಿ ಬದಿ ವ್ಯಾಪಾರಿಗಳನ್ನು ಬೆನ್ನಟ್ಟಿದ್ದಾರೆ. ನಂತರ ವ್ಯಾಪಾರಿಯ ತಕ್ಕಡಿ, ತರಕಾರಿಗಳನ್ನು ರೈಲ್ವೇ ಹಳಿಯ ಮೇಲೆ ಎಸೆದಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್)