ಉತ್ತರಪ್ರದೇಶ: ( snake ) ಪತ್ನಿಯನ್ನು ಕೊಲೆ ಮಾಡಲು ಆಲೋಚಿಸಿದ್ದ ಪತಿ ಯಾರಿಗೂ ಅನುಮಾನ ಬರದ ರೀತಿಯಲ್ಲಿ ಆಕೆ ಕಥೆ ಮುಗಿಸಲು ಹಾವಾಡಿಗರಿಗೆ ಸುಪಾರಿ ಕೊಟ್ಟು ಸಿಕ್ಕಿ ಬಿದ್ದಿರುವ ಘಟನೆ ಉತ್ತರಪ್ರದೇಶದ ಕಾಮ್ಪುರದಲ್ಲಿ ನಡೆದಿದೆ.
ಅಂಶಿಕಾ ಎಂಬ ಮಹಿಳೆ ದೂರು ನೀಡಿದ್ದು, ನಾಲ್ಕು ವರ್ಷಗಳ ಹಿಂದೆ ಕಾನ್ಸ್ಟೆಬಲ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ, ಆಗ ಅನಿವಾರ್ಯವಾಗಿ ಆಕೆಯನ್ನು ಮದುವೆಯಾಗಬೇಕಾಯಿತು ಇದು ಒತ್ತಡದ ಸಂಬಂಧವಾಗಿತ್ತು.ಮದುವೆಯಾಗಿದ್ದ, ಆರಂಭದಲ್ಲಿ ತನ್ನ ಸಹೋದರಿ ಮನೆಯಲ್ಲಿ ಆಕೆಯನ್ನು ಇರಿಸಿದ್ದ. ಬಳಿಕ ಆತ ಉತ್ತರ ಪ್ರದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ ಬಳಿಕ ಆಕೆಯನ್ನು ಪತ್ನಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದ.
ಈ ಕುರಿತು ಅಂಶಿಕಾ ದೂರು ನೀಡಿದ ಬಳಿಕ ಆತ ಆಕೆಯನ್ನು ಒಪ್ಪಿಕೊಂಡಿದ್ದ, ತನ್ನ ಮನೆಗೂ ಕರೆದುಕೊಂಡು ಹೋಗಿದ್ದ, ಅದಾದ ಬಳಿಕ ದೈಹಿಕ ಕಿರುಕುಳ, ಬೆದರಿಕೆಗಳು ಆರಂಭವಾಗಿದ್ದವು. ಹೇಗಾದ್ರೂ ಮಾಡಿ ಯಾರಿಗೂ ಅನುಮಾನ ಬರದೆ ಇರುವ ರೀತಿಯಲ್ಲಿ ಆಕೆಯ ಕಥೆ ಮುಗಿಸಲು ನಿರ್ಧರಿಸಿದ್ದ ಈತ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ.
ಫೆಬ್ರವರಿ 19ರಂದು ಅನುಜ್ ಇಬ್ಬರು ಹಾವಾಡಿಗರನ್ನು ನೇಮಿಸಿ ಆಕೆಗೆ ಹಾವು ಕಚ್ಚಿಸಿದ್ದಾನೆ. ಬಳಿಕ ಆಕೆ ಪ್ರಜ್ಞೆ ತಪ್ಪಿದ್ದಾಳೆ, ಸತ್ತಿದ್ದಾಳೆಮುದ ತಿಳಿದು ಅಲ್ಲಿಂದ ಹೋಗಿದ್ದಾನೆ. ಅಂಶಿಕಾಗೆ ಪ್ರಜ್ಞೆ ಬಂದು ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಅಂಶಿಕಾಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು, (ಎಫ್‌ಐಆರ್) ದಾಖಲಿಸಲು ಆದೇಶಿಸಿ ತನಿಖೆ ನಡೆಸಲಾಗುತ್ತಿದೆ.