ನ್ಯೂಸ್

ಶಾಕಿಂಗ್​ ನ್ಯೂಸ್​: ಮದರಸಾಕ್ಕೆ ಹೋದ 53 ಮಕ್ಕಳಿಗೆ ಕರೊನಾ ಪಾಸಿಟಿವ್​!

ಕಾನ್ಪುರ: ಕರೊನಾ ವೈರಸ್​ ಹರಡುವಿಕೆಯ ವೇಗ ತಗ್ಗುತ್ತಿದೆ ಎಂದು ನೆಮ್ಮದಿಯ ಉಸಿರು ಬಿಡುತ್ತಿರುವ ನಡುವೆಯೇ, ಹಲವು ಕಡೆಗಳಲ್ಲಿ ಇದು ರೌದ್ರಾವತಾರ ತೋರುತ್ತಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ.

ಇದಕ್ಕೆ ಒಂದು ಉದಾಹರಣೆ ಉತ್ತರ ಪ್ರದೇಶದ ಕಾನ್ಪುರ. ಇಲ್ಲಿ 53 ಮಕ್ಕಳ ದೇಹವನ್ನು ಈ ಮಹಾಮಾರಿ ಹೊಕ್ಕಿದ್ದು, ಪಟ್ಟಣದ ಜನರನ್ನು ಆತಂಕಕ್ಕೀಡು ಮಾಡಿದೆ.

ಸಾಮೂಹಿಕವಾಗಿ ಎಲ್ಲಿಯೂ ಸೇರಬಾರದು ಎಂಬ ನಿರ್ಬಂಧಗಳ ನಡುವೆಯೂ ಅಲ್ಲಲ್ಲಿ ಗುಂಪುಗೂಡುವುದು ನಡೆದೇ ಇದೆ. ಇದರ ಪರಿಣಾಮವಾಗಿಯೇ ಇಂಥದ್ದೊಂದು ಘಟನೆ ಸಂಭವಿಸಿದೆ ಎನ್ನಲಾಗಿದೆ. ಏಕೆಂದರೆ ಈ ಎಲ್ಲಾ ಮಕ್ಕಳು ಒಟ್ಟಾಗಿ ಮದರಾಸಾದಲ್ಲಿ ಸೇರಿದ್ದರು.

ಅನ್ವರ್​ಜಂಗ್​ ಬಳಿ ಇರುವ ಕೌಲ್​ ಬಜಾರ್​ನ ಮದಾರಾಸಕ್ಕೆ ಈ ಮಕ್ಕಳು ಹೋದ ಕಾರಣ, ಕರೊನಾ ಸೋಂಕು ಬಾಧಿಸಿದೆ ಎಂದು ವರದಿಯಾಗಿದೆ. ಮೂರು ಪ್ರತ್ಯೇಕ ಮದರಸಾಗಳಿಗೆ ಈ ಮಕ್ಕಳು ಹೋಗಿದ್ದರು. ಎಲ್ಲಾ ಮದರಸಾಗಳಿಗೆ ಹೋಗ ಮಕ್ಕಳಿಗೂ ಕರೊನಾ ಪಾಸಿಟಿವ್​ ಬಂದಿರುವ ಹಿನ್ನೆಲೆಯಲ್ಲಿ ಜನರು ಕಂಗಾಲಾಗಿ ಹೋಗಿದ್ದಾರೆ.

ಈ ಎಲ್ಲಾ ಮಕ್ಕಳು 10 ರಿಂದ 20 ವರ್ಷ ಒಳಗಿನವರು.

ಉತ್ತರ ಪ್ರದೇಶದಲ್ಲಿ ಇಲ್ಲಿಯವರೆಗೆ ಒಟ್ಟು 1,843 ಪ್ರಕರಣಗಳು ದಾಖಲಾಗಿದ್ದು, ಒಬ್ಬರೂ ಗುಣಮುಖರಾಗಿಲ್ಲ. 29 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. (ಏಜನ್ಸೀಸ್​)