ನ್ಯೂಸ್

ಲೈಂಗಿಕ ಕಿರುಕುಳ, ಸುಲಿಗೆ ಆರೋಪದ ಮೇಲೆ ಕನ್ನಡ ಕಿರುತೆರೆ ನಟನ ಬಂಧನ | Arrested

ಬೆಂಗಳೂರು: ಲೈಂಗಿಕ ಕಿರುಕುಳ, ಹಲ್ಲೆ, ಸುಲಿಗೆ ಮತ್ತು ಬೆದರಿಕೆ ಆರೋಪದ ಮೇಲೆ ಕನ್ನಡದ ಕಿರುತೆರೆ ನಟ ಚರಿತ್​ ಬಾಳಪ್ಪ ಎಂಬುವವರನ್ನು ಶುಕ್ರವಾರ ಪೊಲೀಸರು(Arrested) ಬಂಧಿಸಿದ್ದಾರೆ.

29 ವರ್ಷದ ನಟಿ ನೀಡಿರುವ ದೂರಿನ ಮೇಲೆ ಚರಿತ್​ ಬಾಳಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲುಗು ನಟಿಯೊಬ್ಬರ ಜತೆ ಸಂಬಂಧ ಬೆಳಸಿದ್ದ ನಟ ಚರಿತ್​, ನನ್ನ ಜತೆ ಅಸಭ್ಯ ವರ್ತನೆ ಮಾಡಿದ್ದಾನೆ ಎಂದು ಆರೋಪಿಸಿದ ನಟಿ, ದೈಹಿಕ ಸಂಬಂಧಕ್ಕೆ ಬಲವಂತ ಪಡಿಸಿದ್ದಾನೆ. ಅಲ್ಲದೆ, ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೆಲ್ಲಾ, 2023ರ ನವಂಬರ್​ನಿಂದ 2024 ಡಿಸೆಂಬರ್​ ಅಂದರೆ ಒಂದು ವರ್ಷದ ಅಂತರಲ್ಲಿ ನಡೆದಿದೆ ಎಂದಿರುವ ನಟಿ, ಯಾರು ಇಲ್ಲ ಸಮಯದಲ್ಲಿ ಚರಿತ್​ ಗುಂಡಾಗಳನ್ನು ಮನೆಗೆ ಕರೆದುಕೊಂಡು ಬಂದು ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾನೆ. ಖಾಸಗಿ ಪೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುವುದಾಗಿ ಹೇಳಿದ್ದಾನೆ ಎಂದು ಆರೋಪಿಸಿದ್ದಾರೆ. ನಟನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ನಟ ಚರಿತ್​ ಬಾಳಪ್ಪ ಕನ್ನಡದ ಜನಪ್ರಿಯ ಧಾರವಾಹಿ 'ಮುದ್ದುಲಕ್ಷ್ಮೀ' ಯಲ್ಲಿ ನಟಿಸಿದ್ದಾರೆ. ಅಲ್ಲದೇ, ಇತ್ತೀಚಿಗೆ ತೆಲುಗು ಸೀರಿಯಲ್​ಗಳಲ್ಲಿ ಕೂಡ ಪ್ರಸಿದ್ಧಿ ಪಡೆದಿದ್ದಾರೆ.