ಶೃಂಗೇರಿ ಅಡ್ಡಗದ್ದೆ ಗ್ರಾಪಂಯಲ್ಲಿ ಏರ್ಪಡಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಕೊಡಿಗೆತೋಟ ಪದ್ಮನಾಭರಾವ್ ಅವರನ್ನು ಗೌರವಿಸಲಾಯಿತು. ಶ್ರೀಕಂಠಯ್ಯ, ಸುಮಂಗಲಿ ಅನಂದಸ್ವಾಮಿ, ಎ.ಎಂ.ಶ್ರೀಧರ್ ರಾವ್ ಇದ್ದರು. 
ನ್ಯೂಸ್

ಸ್ವಯಂ ಪ್ರೇರಣೆಯಿಂದ ಸೇರ್ಪಡೆಗೊಳ್ಳಿ

ಜಿ. ಗಜೇಂದ್ರ

ಶೃಂಗೇರಿ: ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾದ ದಿನವನ್ನು ಸಂತಸದಿಂದ ಆಚರಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಹೇಳಿದರು.
ಅಡ್ಡಗದ್ದೆ ಗ್ರಾಪಂಯ ಕೊಡಿಗೆತೋಟ ಪದ್ಮನಾಭರಾವ್ ಮನೆಯಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಕಸಾಪ ಹಿರಿಯ ಸದಸ್ಯ ಪದ್ಮನಾಭರಾವ್ ಅವರನ್ನು ಗೌರವಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಮೂಲಕ ರಾಜ್ಯದಲ್ಲಿ ಕನ್ನಡದ ಬೆಳವಣಿಗೆಗೆ ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕಸಾಪಕ್ಕೆ ಹೊಸ ಸದಸ್ಯರು ಸ್ವಯಂ ಪ್ರೇರಣೆಯಿಂದ ಸೇರ್ಪಡೆಯಾಗಬೇಕು. ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಕ್ಕೆ ಕನ್ನಡಾಭಿಮಾನಿಗಳು ಆಗಮಿಸಬೇಕು ಎಂದರು.
ಕೊಡಿಗೆತೋಟ ಪದ್ಮನಾಭರಾವ್ ಅವರನ್ನು ತಾಲೂಕು ಕಸಾಪದಿಂದ ಗೌರವಿಸಲಾಯಿತು. ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ಎ.ಎಂ.ಶ್ರೀಧರರಾವ್, ಶೂನ್ಯ ರಮೇಶ್, ಶ್ರೀಕಂಠಯ್ಯ, ಜಿ.ವಿ.ಗಣೇಶಯ್ಯ, ಉಳುವೆ ರಮೇಶ್, ಕವಿಲುಕೊಡಿಗೆ ಶ್ರೀಧರರಾವ್, ಶಿವಾನಂದರಾವ್, ಸುಮಂಗಲಿ ಆನಂದಸ್ವಾಮಿ ಇತರರಿದ್ದರು.