filter: 0; fileterIntensity: 0.0; filterMask: 0; module: photo; hw-remosaic: false; touch: (-1.0, -1.0); sceneMode: 2; cct_value: 0; AI_Scene: (200, 0); aec_lux: 102.38412; aec_lux_index: 0; albedo: ; confidence: ; motionLevel: -1; weatherinfo: null; temperature: 43; 
ನ್ಯೂಸ್

ಕನ್ನಡ ರಥಯಾತ್ರೆಗೆ ಹಾವೇರಿಯಲ್ಲಿ ಅದ್ದೂರಿ ಸ್ವಾಗತ

ಹಾವೇರಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕ ರುದ್ರಪ್ಪ ಲಮಾಣಿ ತಾಯಿ ಭುವನೇಶ್ವರಿ ಮೂತಿರ್ಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು.

ನಗರದ ಕೆಪಿಟಿಸಿಎಲ್​ ಕಚೇರಿ ಎದುರು ಸೇರಿದ ಕನ್ನಡಾಭಿಮಾನಿಗಳು ಕನ್ನಡ ಜ್ಯೋತಿ ರಥಯಾತ್ರೆ ಆಗಮಿಸುತ್ತಿದ್ದಂತೆ ಜೈಕಾರ್​ ಕೂಗಿದರು. ಸ್ವಾತಂತ್ರ$್ಯ ಹೋರಾಟಗಾರ ಸಂಗೂರ ಕರಿಯಪ್ಪ ಪುತ್ಥಳಿಯಿಂದ ಆರಂಭವಾದ ಮೆರವಣಿಗೆ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಸಾಗಿ ಬಂದಿತು. ಡೊಳ್ಳಿನ ಮೇಳದ ಕಲಾವಿದರು, ಕನ್ನಡ ಶಲ್ಯ ಧರಿಸಿದ್ದ ಕನ್ನಡಾಭಿಮಾನಿಗಳು ಮತ್ತು ಕನ್ನಡ ಬಾವುಟ ಹಿಡಿದುಕೊಂಡಿದ್ದ ವಿದ್ಯಾಥಿರ್ಗಳು, ಎನ್​ಸಿಸಿ ಶಿಬಿರಾಥಿರ್ಗಳು ಮೆರವಣಿಗೆಯುದ್ದಕ್ಕೂ ಸಾಗಿ ಬಂದರು.

ಸಾಹಿತಿ ಸತೀಶ ಕುಲಕಣಿರ್, ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ತಹಸೀಲ್ದಾರ್​ ಶರಣಮ್ಮ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಣ್ಣ ಸಾತೇನಹಳ್ಳಿ, ಸದಸ್ಯ ಸಂಜೀವಕುಮಾರ ನೀರಲಗಿ, ಆಯುಕ್ತ ಪರಶುರಾಮ ಛಲವಾದಿ, ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಮಾದೇಗೌಡ ಗಾಜಿಗೌಡ್ರ, ಎಂ.ಎಸ್​.ಕೋರಿಶೆಟ್ಟರ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಘಟಕದ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಡಾ. ಗೀತಾ ಸುತ್ತಕೋಟಿ, ಆರ್​.ವಿ. ಚಿನ್ನಿಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.