ಶಿವಮೊಗ್ಗ ಎಲ್‌ಎಲ್‌ಆರ್ ರಸ್ತೆಯ ಸ್ನೇಹ ಮಯಿ ಸಂಘದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಷ್ಟ್ರಮಟ್ಟದ ಏರೋಬಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಶಿವಮೊಗ್ಗದ ಎಸ್.ರಿಷಿಕಾ ಅವರನ್ನು ಸನ್ಮಾನಿಸಲಾಯಿತು. ಆರ್.ಪ್ರಸನ್ನಕುಮಾರ್, ಎಸ್.ಚಿನ್ನಪ್ಪ, ಎಚ್.ಸಿ.ಯೋಗೇಶ್, ಜಿ.ವಿಜಯಕುಮಾರ್, ನಾದನ್, ಜಯಶೀಲನ್, ರವಿಕುಮಾರ್, ಮೊಹಮ್ಮದ್, ಪವನ್, ವಿಜಯಕುಮಾರ್ ಇದ್ದರು. 
ನ್ಯೂಸ್

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ

ಶಿವಮೊಗ್ಗ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಅತ್ಯಂತ ಸುಂದರವಾದ ಸುಲಲಿತವಾದ ಎಲ್ಲರೂ ಒಪ್ಪುವ ಭಾಷೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.

ಎಲ್‌ಎಲ್‌ಆರ್ ರಸ್ತೆಯ ಸ್ನೇಹಮಯಿ ಸಂಘದಿಂದ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಪಾಶ್ಚಿಮಾತ್ಯ ಭಾಷೆಯಿಂದ ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಭಾಷೆಯನ್ನು ಮಾತನಾಡಿದರೆ ನಮಗೆ ಅಗೌರವವಾಗುತ್ತದೆ ಎನ್ನುವ ಸಾಕಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಅನ್ಯ ಭಾಷೆಯನ್ನು ಪ್ರೀತಿಸಿ ಕನ್ನಡದಲ್ಲಿ ನಮ್ಮ ನಡೆ-ನುಡಿ ವ್ಯವಹಾರ ನಡೆಸಬೇಕು. ಕನ್ನಡವನ್ನು ಉಳಿಸಿ ಬೆಳೆಸಿ ಅನ್ನುವುದಕ್ಕಿಂತ ಕನ್ನಡವನ್ನು ನಾವು ಬಳಸಬೇಕು ಎಂದರು.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಏರೋಬಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಶಿವಮೊಗ್ಗದ ಎಸ್.ರಿಷಿಕಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಸ್.ಚಿನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಪ್ರಮುಖರಾದ ನಾದನ್, ಜಯಶೀಲನ್, ರವಿಕುಮಾರ್, ಮೊಹಮ್ಮದ್, ಪವನ್, ವಿಜಯಕುಮಾರ್ ಉಪಸ್ಥಿತರಿದ್ದರು.