ನ್ಯೂಸ್

ಮಕ್ಕಳಿಂದಲೇ ನಿರ್ಮಾಣವಾದ ಮಕ್ಕಳ ಸಿನಿಮಾ 'ನಿರ್ಮಲ' ಬ್ಯಾಂಕಾಕ್​ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ

ಬೆಂಗಳೂರು: ಮಕ್ಕಳಿಂದಲೇ ನಿರ್ಮಾಣವಾಗಿರುವ ಮಕ್ಕಳ ಕನ್ನಡ ಸಿನಿಮಾ 'ನಿರ್ಮಲ' ಬ್ಯಾಂಕಾಕ್​ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಆ ಮೂಲಕ ಈ ಉತ್ಸವಕ್ಕೆ ಆಯ್ಕೆಯಾದ ಕನ್ನಡದ ಏಕೈಕ ಮಕ್ಕಳ ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ, ನಿರ್ಮಾಪಕರೂ ಆಗಿರುವ ಬಾ.ಮಾ.ಹರೀಶ್ ಅವರ ಪುತ್ರ ಉಲ್ಲಾಸ್​ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್​ ಬ್ಯಾನರ್​ನಲ್ಲಿ ಈ ಮಕ್ಕಳ ಚಿತ್ರ ಮೂಡಿ ಬಂದಿದೆ.

ವಿಶೇಷವೆಂದರೆ ಈ ಮಕ್ಕಳ ಚಿತ್ರದಲ್ಲಿ ಬರೀ ಕಲಾವಿದರಷ್ಟೇ ಮಕ್ಕಳಲ್ಲ. ಈ ಸಿನಿಮಾದ ನಿರ್ಮಾಣ, ನಿರ್ದೇಶನ, ಸಂಗೀತ ಸಂಯೋಜನೆ, ಸಂಕಲನ, ವಿನ್ಯಾಸ ಎಲ್ಲವೂ ಮಕ್ಕಳದ್ದೇ. ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್​ನ ಮಕ್ಕಳೇ ಈ ಎಲ್ಲವನ್ನೂ ನಿರ್ವಹಿಸಿದ್ದಾರೆ. ಆದರೆ ಈ ಚಿತ್ರದ ಸಿನಿಮಾಟೋಗ್ರಫಿ ಇತರ ಪ್ರಮುಖ ತಂತ್ರಜ್ಞರು ಮಾತ್ರ ವಯಸ್ಕರು. ಉಲ್ಲಾಸ್, ವಿಶಾಲ್ ಸಂಜಯ್ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.