ನ್ಯೂಸ್

ಪ್ರಜ್ಞೆ ತಪ್ಪಿಸಿ ಅತ್ಯಾಚಾರ, ಬೆದರಿಕೆಯೊಡ್ಡಿ 15 ಲಕ್ಷ ರೂ.ಹಣ ಪೀಕಿದ ಆರೋಪ…ನಟ ವೀರೇಂದ್ರ ಬಾಬು ಅರೆಸ್ಟ್

ಬೆಂಗಳೂರು: ನಟ,ನಿರ್ಮಾಪಕ ಸ್ವಯಂ ಕೃಷಿ ವೀರೇಂದ್ರ ಬಾಬುನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಮಹಿಳೆಯೋರ್ವರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ವೀರೇಂದ್ರ ಬಾಬುನನ್ನು ಅರೆಸ್ಟ್ ಮಾಡಲಾಗಿದೆ.

ಅತ್ಯಾಚಾರ ಮಾಡಿ ಅದನ್ನ ವಿಡಿಯೋ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಬೆದರಿಕೆಯೊಡ್ಡಿ 15 ಲಕ್ಷ ರೂ.ಹಣವನ್ನು ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಹಣ ನೀಡದಿದ್ದರೆ ವಿಡಿಯೋ ರಿಲೀಸ್ ಮಾಡೋದಾಗಿ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ.

ಘಟನೆಯು ಕಳೆದ 2021 ರಲ್ಲಿ ನಡೆದಿತ್ತು. ಅಂದು ಮಹಿಳೆ ಒಡವೆ ಮಾರಿ ಹಣ ಕೊಟ್ಟು ಸುಮ್ಮನಾಗಿದ್ದರು. ಆದರೆ ಕಳೆದ ಜುಲೈ 30 ರಂದು ಮತ್ತೆ ಮಹಿಳೆಯನ್ನು ಕರೆಯಿಸಿ ಬೆದರಿಕೆ‌‌‌‌ ಹಾಕಲಾಗಿದೆ. ಮಹಿಳೆಯನ್ನ ಕಾರಿನಲ್ಲಿ ಸುತ್ತಾಡಿಸಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡಿರೋದಾಗಿ ಆರೋಪ‌‌ ಮಾಡಲಾಗಿದೆ. ಅಷ್ಟೇ ಅಲ್ಲ, ಪಾಯಿಂಟ್ ಬ್ಲಾಕ್ ನಲ್ಲಿ ಗನ್ ಇಟ್ಟು ಬೆದರಿಸಿದ್ದಾರೆಂದು ದೂರು ನೀಡಲಾಗಿದೆ.

ಘಟನೆ ಸಂಬಂಧ ವೀರೇಂದ್ರ ಬಾಬು ಹಾಗೂ ಸ್ನೇಹಿತರ ಮೇಲೆ ಎಫ್ಐಆರ್ ದಾಖಲಾಗಿದ್ದು, ಕೊಡಿಗೆಹಳ್ಳಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.