ನ್ಯೂಸ್

ಆಯುಷ್ಮಾನ್​ ಖುರಾನಾಗ್ಯಾಕೆ ಬಂತು ಬಕೆಟ್​ ಹಿಡಿಯೋ ಬುದ್ಧಿ!; ಕಂಗನಾ ರಣಾವತ್​ ತರಾಟೆ

ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಸುದ್ದಿಯಲ್ಲಿರುವ ಕಂಗನಾ ರಣಾವತ್​ ಒಂದಾದ ಮೇಲೊಂದು ಹೇಳಿಕೆ ನೀಡುತ್ತ ಬಾಲಿವುಡ್​ ಮಂದಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ನೆಪೋಟಿಸಂ ಬೆಂಬಸಲಿಸುವವರ ವಿರುದ್ಧ ಸಮರ ಸಾರುತ್ತಿದ್ದಾರೆ. ಅದರಲ್ಲೂ ಸ್ಟಾರ್ ಕುಡಿಗಳೇ ಕಂಗನಾ ಟಾರ್ಗೇಟ್​. ಆಲಿಯಾ ಭಟ್ ಅವರಿಂದ ಹಿಡಿದು ಕರಣ್ ಜೋಹರ್, ಮಹೇಶ್​ ಭಟ್​ ಸೇರಿ ಸಾಕಷ್ಟು ಮಂದಿಯ ಬೆವರಿಳಿಸಿದ್ದಾರೆ. ಇದೀಗ ಗಾಡ್​ಫಾದರ್​ ಇಲ್ಲದೆ ಇಂಡಸ್ಟ್ರಿಗೆ ಬಂದ ಆಯುಷ್ಮಾನ್​ ಖುರಾನಾಗೂ ಕಂಗನಾ ಮತ್ತವರ ಟೀಮ್​ ತರಾಟೆ ತೆಗೆದುಕೊಂಡಿದೆ. ಆಯುಷ್ಮಾನ್​ಗ್ಯಾಕೆ ಬಕೆಟ್​ ಹಿಡಿಯೋ ಬುದ್ಧಿ ಬಂತು ಎಂದಿದ್ದಾರೆ.

ಹೌದು, ಸುಶಾಂತ್​ ಸಾವಿನಲ್ಲಿ ರಿಯಾ ಚಕ್ರವರ್ತಿ ಕೈವಾಡ ಇದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಂತೆ, ಬಾಲಿವುಡ್​ನ ಕಾಂಟ್ರವರ್ಸಿಯಲ್ ವಿಮರ್ಶೆಗಾರ ಕೆಕೆಆರ್​, ಆಯಷ್ಮಾನ್​ ವಿರುದ್ಧ ಒಂದಷ್ಟು ಆರೋಪಗಳನ್ನು ಮಾಡಿದ್ದಾರೆ. ‘ಸ್ವತಃ ಆಯುಷ್ಮಾನ್​ ರಿಯಾಳಿಗೆ ಬೆಂಬಲ ನೀಡುತ್ತಿದ್ದಾರೆ. ಅದಕ್ಕೆ ಈ ಮೂರು ಕಾರಣಗಳು ಇಲ್ಲಿವೆ. ಬಾಲಿವುಡ್​ನಲ್ಲಿ ಆಯುಷ್ಮಾನ್​ ಬದುಕುಳಿಯಬೇಕು. ಯಶ್​ ರಾಜ್​ ಫಿಲಂಸ್​ನ ಸಿನಿಮಾಗಳಲ್ಲಿ ಆಯುಷ್ಮಾನ್​ ನಟಿಸುತ್ತಿದ್ದಾರೆ. ಮೂರನೇಯದು ಮತ್ತು ಬಹುಮುಖ್ಯವಾಗಿ ಸುಶಾಂತ್​ ಸಿಂಗ್​ ಆಯುಷ್ಮಾನ್​ಗೆ ಪ್ರತಿಸ್ಪರ್ಧಿಯಾಗಿದ್ದ’ ಎಂದಿದ್ದಾರೆ. ಇದಕ್ಕೆ ಕಂಗನಾ ಪ್ರತಿಕ್ರಿಯಿಸಿದ್ದಾರೆ.

‘ಹೊರಗಿನಿಂದ ಬಂದ ಆಯುಷ್ಮಾನ್​ನಂಥವರು, ಬಾಲಿವುಡ್​ ಮಾಫಿಯಾ ಬೆಂಬಲಿಸುತ್ತಾ ಬಕೆಟ್​ ಹಿಡಿಯುತ್ತಾರೆ. ಅವರಿಗೆ ಯಾರಿಂದಲೂ ಬೆದರಿಕೆ ಇರುವುದಿಲ್ಲ. ಕಂಗನಾ ಮತ್ತು ಸುಶಾಂತ್​ನಂತಹ ಕೆಲವರು ಎದುರಿಸುತ್ತಿರುವ ಸಂಘರ್ಷಗಳ ಸಂಪೂರ್ಣ ಲಾಭವನ್ನು ಅವರು ಬಹಿರಂಗವಾಗಿ ನಿರಾಕರಿಸಿ, ಅಪಹಾಸ್ಯ ಮಾಡುವ ಮೂಲಕ ಮಾಫಿಯಾದವರ ಬೆನ್ನಿಗೆ ನಿಲ್ಲುತ್ತಾರೆ’ ಎಂದು ಆಯುಷ್ಮಾನ್​ ವಿರುದ್ಧವೂ ಸಮರ ಸಾರಿದ್ದಾರೆ.