ಮುಂಬೈ: ಬಾಲಿವುಡ್ನಲ್ಲಿ ಪ್ರತಿಭಾವಂತರಿಗೆ ಮನ್ನಣೆ ಸಿಗುತ್ತಿಲ್ಲ. ಪ್ರೋತ್ಸಾಹಿಸುವ ಮಂದಿ ಸಹ ಕಡಿಮೆ ಎಂದು ನಟಿ ಕಂಗನಾ ರಣಾವತ್ ಹಿಂದಿ ಚಿತ್ರರಂಗದ ಬಗ್ಗೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಅನಿಶ್ಚಿತತೆಯಲ್ಲಿ ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್ ಸ್ಥಿರ..ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ನಿಫ್ಟಿ!
ನನ್ನ ಪ್ರಕಾರ ನಾನು ಒಳ್ಳೇಯವಳೇ. ನನ್ನ ಸುತ್ತಮುತ್ತಲಿನವರೊಂದಿಗೆ ಸೌಜನ್ಯದಿಂದ ವರ್ತಿಸುತ್ತೇನೆ. ನಾನು ಚುನಾವಣೆಯಲ್ಲಿ ಗೆದ್ದು, ಉದ್ಯಮದಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದಿದ್ದೇನೆ. ಆದರೆ ನನ್ನೊಂದಿಗೆ ಕೆಲವು ಜನರಿಗೆ ಮಾತ್ರ ಸಮಸ್ಯೆ ಇದೆ. ಆ ಸಮಸ್ಯೆ ನನ್ನಲ್ಲಿಯೇ ಇದೆಯೇ ಎಂದು ಯೋಚಿಸಿರುವೆ. ಅವರು ಕೂಡ ಒಮ್ಮೆ ಯೋಚಿಸಿದರೆ ಒಳ್ಳೆಯದು ಎಂದಿದ್ದಾರೆ.
ನನ್ನ ಪ್ರಕಾರ ಬಾಲಿವುಡ್ ನಿಸ್ಸಹಾಯಕ ಸ್ಥಳ. ಇಲ್ಲಿನ ಪ್ರಮುಖರು ಅಸಹಾಯಕರು. ಪ್ರತಿಭೆ ನೋಡಿ ಅಸೂಯೆ ಪಡುತ್ತಾರೆ. ಯಾರಾದರೂ ಬಿದ್ದರೆ ತಪ್ಪದೆ ಅವರ ಭವಿಷ್ಯ ಹಾಳು ಮಾಡುತ್ತಾರೆ. ಅಪಪ್ರಚಾರ ಮಾಡಿ ಈ ಇಂಡಸ್ಟ್ರಿಯಲ್ಲಿ ಅವರನ್ನು ಭಹಿಷ್ಕರಿಸುವಂತೆ ಮಾಡುತ್ತಾರೆ ಎಂದು ಕಂಗನಾ ತನ್ನನ್ನು ಬಹಿಷ್ಕರಿಸಿದ್ದಕ್ಕೆ ಕೌಂಟರ್ ಕೊಟ್ಟಿದ್ದಾರೆ. ಇದೀಗ ಈ ನಟಿಯ ಕಾಮೆಂಟ್ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತಮ್ಮ ವಿರುದ್ಧ ಬಾಲಿವುಡ್ ನಲ್ಲಿ ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದರು. ತಮ್ಮ ಸಿನಿಮಾಗಳಲ್ಲಿ ನಟಿಸಬೇಡಿ ಎಂದು ಹಲವರಿಗೆ ಹೇಳಿದ್ದರು ಎನ್ನಲಾಗಿದೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ರಾಜಕೀಯ ಜೀವನ ಆಧಾರಿತ ಎಮರ್ಜೆನ್ಸಿ’ ಸಿನಿಮಾದಲ್ಲಿ ಕಂಗನಾ ರಣಾವತ್ ನಾಯಕಿ ಮತ್ತು ನಿರ್ದೇಶಿಸಿದ್ದಾರೆ. ಇದು ಸೆ. 6 ರಂದು ತೆರೆಗೆ ಬರಲಿದೆ.