ನ್ಯೂಸ್

ಪಿಡಿಒ ನಾಗಲಿಂಗಪ್ಪ ವಿರುದ್ಧ ಕ್ರಮ ಕೈಗೊಳ್ಳಿ

ಕನಕಗಿರಿ: ರೈತರ, ಕೂಲಿ ಕಾರ್ಮಿಕರ ಕೆಲಸ ನೀಡಲು ಸತಾಯಿಸುತ್ತಿರುವ ತಾಲೂಕಿನ ಕರಡೋಣ ಗ್ರಾಪಂ ಪಿಡಿಒ ನಾಗಲಿಂಗಪ್ಪ ರ‌್ಯಾವಣಕಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ತಾಪಂ ಸಹಾಯಕ ನಿರ್ದೇಶಕಿ ಶರಪೋನ್ನಿಸಾ ಬೇಗಂಗೆ ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ಕರಡೋಣ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಮತ್ತು ಕಾರ್ಮಿಕರ ಹಾಗೂ ನಾನಾ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ. ಈ ಬಗ್ಗೆ ಪಿಡಿಒ ಅವರ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ. ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ದೂರು ನೀಡಿದರೂ ಮೇಲಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಪಿಡಿಒ ನಾಗಲಿಂಗಪ್ಪ ಅವರ ನಿರ್ಲಕ್ಷೃತನದಿಂದ ಬಡವರಿಗೆ ತೊಂದರೆಯಾಗುತ್ತಿದೆ. ಕೂಡಲೇ ಜಿಪಂ ಸಿಇಒ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಾಲೂಕಾಧ್ಯಕ್ಷ ಭೀಮನಗೌಡ ಗುಡದೂರು, ಪ್ರಮುಖರಾದ ಸಣ್ಣ ಶೇಖರಪ್ಪ ಗದ್ದಿ, ಸೋಮನಾಥ ನಾಯಕ, ಬಾಲಪ್ಪ, ಮಹಿಬೂಬುಸಾಬ, ನಿಂಗಪ್ಪ ಬಿ, ಕನಕಪ್ಪ, ವೀರನಗೌಡ ಇತರರಿದ್ದರು.