ಮಹದೇವಪುರ: ದಾಸ ಶ್ರೇಷ್ಠರಲ್ಲೊಬ್ಬರಾಗಿರುವ ಕನಕದಾಸರ ಅಂದಿನ ತತ್ವ,ಆದರ್ಶಗಳನ್ನು ಇಂದಿನ ಯುವ ಸಮೂಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು
ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ವರ್ತೂರು ಶ್ರೀ ಕನಕ ಸೇವ ಸಮಿತಿ ವತಿಯಿಂದ ಅಯೋಜಿಸಿದ್ದ 538 ನೇ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದರು.
ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜನರ ಮನಸ್ಸುಗಳನ್ನು ಬದಲಿಸುತ್ತಾ ಸಮಾಜವನ್ನು ಸರಿದಾರಿಗೆ ತರುಲು ಶ್ರಮಿಸಿದರು. ಅವರ ಜೀವನ ಹಾಗೂ ಸಾಹಿತ್ಯ ಎರಡೂ ನಮಗೆ ಉತ್ತಮ ಮಾರ್ಗವನ್ನು ತೋರುತ್ತವೆ.ಇಂದಿನ ಪೀಳಿಗೆ ಏಳಿಗೆಗೆ ಅವರ ತತ್ವಗಳು ಮಾದರಿ ಎಂದರು.
ಕುಲ ಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ನೀಡಿದ ಸಂದೇಶ ಇಂದಿಗೂ ಪ್ರಸ್ತುತ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ. ಆದರೆ, ನಮ್ಮ ಮನಸ್ಥಿತಿಗಳು ಬದಲಾಗಬೇಕು. ದೇವರು ಭಕ್ತಿಗೆ ಮಾತ್ರ ಒಲಿಯುತ್ತಾನೆ ಹೊರತು ಜಾತಿಗಲ್ಲ ಎಂಬುದನ್ನು ಕನಕದಾಸರು ತೋರಿಸಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸೋಣ ಎಂದು ಹೇಳಿದರು.
ಇದೇ ವೇಳೆ ಮಾಜಿ ಶಾಸಕರ ಬಳಿ ಈ ಭಾಗಕ್ಕೆ ಕನಕ ಭವನದ ಅವಶ್ಯಕತೆಯಿದ್ದು ಮುಂದಿನ ದಿನಗಳಲ್ಲಿ ಕಟ್ಟಡ ಕಲ್ಪಿಸಿಕೊಡಬೇಕೆಂದು ಸಮುದಾಯದವರು ಮನವಿ ಮಾಡಿದರು.
ಕನಕ ಸೇವಾ ಸಮಿತಿ ಅಧ್ಯಕ್ಷರು ಶ್ರೀಧರ್, ವಿ.ಪಿ.ರಕ್ಷೀತ್, ಚಿಕ್ಕಣ್ಣ, ಚಂದ್ರು, ರಾಜಣ್ಣ, ನಾರಾಯಣಸ್ವಾಮಿ, ಮುನಿಯಪ್ಪ, ಉದಯ್, ಎಲ್.ರಾಜೇಶ್, ಮಹೇಂದ್ರ ಮೋದಿ, ವರ್ತೂರು ಶ್ರೀಧರ್ ಮತ್ತಿತರರಿದ್ದರು.