ನಂ.3 ಸಣಾಪುರ ಗ್ರಾಪಂ ಕಚೇರಿಯಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಪಿಡಿಒ ಹಾಲಹರವಿ ಶೇಷಗಿರಿ ಮಾತನಾಡಿದರು. ಅಧ್ಯಕ್ಷ ವೈ.ರಮಣಯ್ಯ, ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರಾದ ವೀರನಗೌಡರೆಡ್ಡಿ, ಕೆ.ಭಾಸ್ಕರರೆಡ್ಡಿ, ಎಚ್.ಹೊನ್ನೂರಮ್ಮ ಇತರರಿದ್ದರು. 
ನ್ಯೂಸ್

ಸರ್ವೇ ಆಗುವತನಕ ಖಾತೆ ಬದಲಾವಣೆ ಬೇಡ

ಕಂಪ್ಲಿ: ತಾಲೂಕಿನ ನಂ.3 ಸಣಾಪುರ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ ವೈ.ರಮಣಯ್ಯ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಇಟಗಿ ಗ್ರಾಮದ ಸರ್ವೇ ನಂ. 193 ಮತ್ತು 194ರಲ್ಲಿ ಸರ್ಕಾರಿ ಜಮೀನು ಅತಿಕ್ರಮವಾಗಿದೆ. ಈಗಾಗಲೇ ನೋಂದಣಿಯಾಗಿದೆ. ಈ ಕುರಿತು ತಾಪಂ ಇಒ, ತಹಸೀಲ್ದಾರರಿಗೆ ಜನಸಂಪರ್ಕ ಸಭೆಯಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿದೆ. ಈ ಸರ್ವೇ ನಂಬರ್‌ಗಳ ಮ್ಯೂಟೇಷನ್ ಮಾಡಬಾರದು ಎಂದು ರತ್ನಮ್ಮ ಅಗೆದಾಳ್, ಪಕ್ಕೀರಪ್ಪ ಅಯ್ಯದಿ ಒತ್ತಾಯಿಸಿದರು. ಸರ್ವೇ ಮಾಡಿಸುವತನಕ ಖಾತೆ ಬದಲಾವಣೆ ಮಾಡಲಾಗುವುದಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪಂಪ್ ಆಪರೇಟರ್‌ಗಳಾದ ರಾಘವೇಂದ್ರ, ಗಂಗಮ್ಮ, ಬಸಯ್ಯಸ್ವಾಮಿ, ಬ್ರಹ್ಮಯ್ಯ, ಸ್ವಚ್ಛತಾಗಾರ ಮೌಲಪ್ಪರ ಪೂರ್ವ ಅನುಮೋದನೆ ಕುರಿತು ಚರ್ಚಿಸಿ ಒಪ್ಪಿಗೆ ಸೂಚಿಸಲಾಯಿತು.

ಪಿಎಂ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಬಂದ ಅರ್ಜಿ, ಕುಡಿವ ನೀರು, ಬೀದಿ ದೀಪ, ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು.

ಪಿಡಿಒ ಹಾಲಹರವಿ ಶೇಷಗಿರಿ, ಕಾರ್ಯದರ್ಶಿ ದೊಡ್ಡಬಸಪ್ಪ, ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರಾದ ವೀರನಗೌಡರೆಡ್ಡಿ, ಕೆ.ಭಾಸ್ಕರರೆಡ್ಡಿ, ಎಚ್.ಹೊನ್ನೂರಮ್ಮ, ಮರಿಯಮ್ಮ, ಆರ್.ಕೆ.ಗವಿಸಿದ್ದಪ್ಪ, ಮರಿಯಮ್ಮ, ಬಸವರಾಜ ಕುರುಗೋಡು, ಹುಲಿಗೆಮ್ಮ ನಿಂಬೆಗಲು, ಲಕ್ಷ್ಮೀ ಇದ್ದರು.