ಬಳ್ಳಾಪುರ ಗ್ರಾಮದ ರೈತರೊಂದಿಗೆ ಶಾಸಕ ಜೆ.ಎನ್.ಗಣೇಶ್ ಚರ್ಚಿಸಿದರು. ಪ್ರಮುಖರಾದ ಬಿ.ಲಿಂಗಪ್ಪ, ಮೌನೇಶ, ಜಡೆಪ್ಪ ಇತರರಿದ್ದರು. 
ನ್ಯೂಸ್

ರಾಜ್ಯಪಾಲರ ನಡೆ ಖಂಡನೀಯ

ಕಂಪ್ಲಿ: ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣ ಆಡಳಿತ ನಡೆಸಲಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಬಳ್ಳಾಪುರ ಗ್ರಾಮದಲ್ಲಿ 35 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಹಿಂದುಳಿದ ವರ್ಗಗಳ ನಾಯಕ ಎರಡನೇ ಅವಧಿಗೆ ಸಿಎಂ ಆಗಿರುವುದನ್ನು ಬಿಜೆಪಿಗರಿಗೆ ಸಹಿಸಲಾಗದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.

ಸಿಎಂಗೆ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ಮಠಾಧೀಶರ ಬೆಂಬಲವಿದೆ. ಬಿಜೆಪಿಯ ಕೆಲ ಶಾಸಕರ ಬೆಂಬಲವೂ ಇದೆ. ರಾಜ್ಯಪಾಲರು ಪಕ್ಷಪಾತ ಅನುಸರಿಸುತ್ತಿದ್ದು ಅವರ ನಡೆ ಖಂಡನೀಯ ಎಂದರು.

ಇದೇ ಸಂದರ್ಭದಲ್ಲಿ ರೈತರು ಗ್ರಾಮದ ರಸ್ತೆಗಳ ಅಭಿವೃದ್ಧಿ, ಎರಡನೇ ಬೆಳೆಗೆ ನೀರು ಒದಗಿಸಲಿಕ್ಕಾಗಿ ವಿವೇಚನೆಯಿಂದ ಜಲಾಶಯ ನೀರು ಬಳಸುವಲ್ಲಿ ಅಧಿಕಾರಿಗಳು ಕ್ರಮವಹಿಸಲು ಸೂಚಿಸಬೇಕೆಂದು ಒತ್ತಾಯಿಸಿದರು.

ಶ್ರೀರಾಮರಂಗಾಪುರದಲ್ಲೂ 21.49ಲಕ್ಷ ರೂ.ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿದರು. ಪ್ರಮುಖರಾದ ಬಿ.ಲಿಂಗಪ್ಪ, ಮೌನೇಶ್ ಜಡೆಪ್ಪ, ಎಸ್.ಆರ್.ಪುರದ ಬಿ.ವೆಂಕಟಪತಿ, ವಿ.ರಾಮಾಂಜನೇಯಲು, ಬಿ.ಮಂಜುನಾಥ, ಶ್ರೀನಿವಾಸ, ನಾಗಭೂಷಣ ಇತರರಿದ್ದರು.