ನ್ಯೂಸ್

ನಾಳೆಯೇ ರಾಮಮಂದಿರ ಭೂಮಿಪೂಜೆ: ಇಂದು ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್​ ಮನೆಯಲ್ಲಿ ಹನುಮಾನ್​ ಚಾಲೀಸಾ ಪಠಣ

ಭೋಪಾಲ್​: ರಾಮಮಂದಿರ ಭೂಮಿಪೂಜೆಗೆ ಇನ್ನೊಂದೇ ದಿನ ಬಾಕಿ ಇದೆ. ಹೀಗಿರುವಾಗ ಇಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ತಮ್ಮ ಮನೆಯಲ್ಲಿ ಹನುಮಾನ್ ಚಾಲೀಸಾ ಪಠಣ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಬಗ್ಗೆ ಕಾಂಗ್ರೆಸ್​ ವಕ್ತಾರ ಭೂಪೇಂದ್ರ ಗುಪ್ತಾ ಅವರು ಭಾನುವಾರವೇ ಮಾಹಿತಿ ನೀಡಿದ್ದರು. ಅದರಂತೆಯೇ ಇಂದು ಕಮಲನಾಥ್ ಅವರ ಮನೆಯಲ್ಲಿ ಹನುಮಾನ್​ ಚಾಲೀಸ್​ ಪಠಣ ಮಾಡಲಾಗಿದೆ. ಇದನ್ನೂ ಓದಿ:  ಚಿರು ಸಿನಿಮಾಗಳ ಡಬ್ಬಿಂಗ್​ನಲ್ಲಿ ಧ್ರುವ ಸರ್ಜಾ ಭಾಗಿಯಾಗುವುದು ಯಾವಾಗಿನಿಂದ?

ಕಮಲನಾಥ್​ ಅವರು ಆಂಜನೇಯನ ಭಕ್ತ. ಕೆಲವೇ ವರ್ಷಗಳ ಹಿಂದೆ ಚಿಂದ್ವಾರಾ ಜಿಲ್ಲೆಯಲ್ಲಿ ಅವರು 101 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಅವರು ಪ್ರತಿಷ್ಠಾಪನೆ ಮಾಡಿಸಿದ್ದಾರೆ ಎಂದು ಗುಪ್ತಾ ಹೇಳಿದ್ದಾರೆ.

ಹಾಗೇ ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ರಾಮರ್ಚಾ ಪೂಜೆ ನಡೆಯುತ್ತಿದೆ. ನಾಳೆ ನಡೆಯಲಿರುವ ಭೂಮಿ ಪೂಜೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ರಾಜ್ಯಪಾಲರಾದ ಆನಂದಿಬೆನ್​ ಪಟೇಲ್​, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ನಾಳಿನ ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್​)