ನ್ಯೂಸ್

ತಮ್ಮ ಪಕ್ಷದ ಮೈತ್ರಿ ಯಾರೊಂದಿಗೆ ಎಂಬುದನ್ನು ಬಹಿರಂಗಪಡಿಸಿದ ಕಮಲಹಾಸನ್...

ಚೆನ್ನೈ: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಹೊಸದೇನಲ್ಲ. ಅದೇ ನಿಟ್ಟಿನಲ್ಲಿ ಸಾಗುತ್ತಿರುವ ರಾಜಕಾರಣಿ ಕಮ್​ ನಟ ಕಮಲಹಾಸನ್​ ಕೂಡ ತಮ್ಮ ಪಕ್ಷದ ಮೈತ್ರಿ ಯಾರೊಂದಿಗೆ ಎಂಬ ವಿಷಯವನ್ನು ಇದೀಗ ಬಹಿರಂಗಪಡಿಸಿದ್ದಾರೆ.

ಸಿನಿಮಾರಂಗದಲ್ಲಿ ಹೆಸರು ಮಾಡಿರುವ ನಟ ಕಮಲಹಾಸನ್ ಅದೇ ಜನಪ್ರಿಯತೆ ನಂಬಿಕೊಂಡು ತಮಿಳುನಾಡಿನಲ್ಲಿ 'ಮಕ್ಕಳ್​ ನೀದಿ ಮೈಯಂ' (ಎಂಎನ್​ಎಂ) ಎಂಬ ಪ್ರಾದೇಶಿಕ ಪಕ್ಷವನ್ನು ಈಗಾಗಲೇ ಹುಟ್ಟು ಹಾಕಿದ್ದಾರೆ. ಮಾತ್ರವಲ್ಲ, ತಮಿಳುನಾಡಿನಲ್ಲಿ 2021ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬುದನ್ನು ಅವರು ಈಗಲೇ ಹೇಳಿಬಿಟ್ಟಿದ್ದಾರೆ.

ಮುಂದಿನ ಚುನಾವಣೆ ಕುರಿತು ಸೋಮವಾರ ಪಕ್ಷದ ಪದಾಧಿಕಾರಿಗಳ ಜತೆ ಅವರು ಸಭೆ ನಡೆಸಿದ್ದಾರೆ. ಜಯ ಗಳಿಸುವ ನಿಟ್ಟಿನಲ್ಲಿ ಈಗಿಂದಲೇ ಕಾರ್ಯಪ್ರವೃತ್ತರಾಗುವಂತೆ ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿರುವ ಕಮಲಹಾಸನ್​, ತಮ್ಮ ಪಕ್ಷದ ಮೈತ್ರಿ ಏನಿದ್ದರೂ ಜನರೊಂದಿಗೆ ಎಂಬುದಾಗಿ ಹೇಳಿದ್ದಾರೆ. ಈ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಚೊಚ್ಚಲ ಚುನಾವಣೆಯನ್ನು ಎದುರಿಸಿತ್ತು. (ಏಜೆನ್ಸೀಸ್​)