ಚೆನ್ನೈ: ಉಳಗನಾಯಕನ್ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾ ಜುಲೈ 12ರಂದು ಬಿಡುಗಡೆಯಾಗಿದೆ. ಈ ಚಿತ್ರವು 1996ರಲ್ಲಿ ತೆರೆಕಂಡಿದ್ದ ಇಂಡಿಯನ್ ಸಿನಿಮಾದ ಮುಂದುವರಿದ ಭಾಗವಾಗಿದೆ. 18 ವರ್ಷಗಳ ನಂತರ ಬಿಡುಗಡೆಯಾದ ಇಂಡಿಯನ್ 2 ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಎಡವಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾದ ಮೊದಲ ದಿನ 25.6 ಕೋಟಿ ಗಳಿಸಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಪಡೆದು ಎರಡನೇ ದಿನಕ್ಕೆ ಇಳಿಕೆ ಕಂಡಿದೆ.
ಇದನ್ನು ಓದಿ: ಮುಸ್ಲಿಮರ ಜನಸಂಖ್ಯೆ ಏರಿಕೆ; ಇದು ನನಗೆ ರಾಜಕೀಯವಲ್ಲ.. ಜೀವನ ಮತ್ತು ಸಾವಿನ ವಿಚಾರ ಎಂದಿದ್ದೇಕೆ ಸಿಎಂ
ಸಿನಿಮಾ ಬಿಡುಗಡೆಯಾಗ ಬಳಿಕ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಚಿತ್ರದ ನಿರ್ದೇಶಕ ಎಸ್.ಶಂಕರ್ ಅವರ ಹಿಂದಿನ ಕೆಲಸಕ್ಕಾಗಿ ಸಾಕಷ್ಟು ಟ್ರೋಲ್ ಆಗುತ್ತಿದೆ. ಚಿತ್ರದ ದೊಡ್ಡ ಸಮಸ್ಯೆ ಎಂದರೆ ಅದರ ನೀರಸ ದ್ವಿತೀಯಾರ್ಧ ಮತ್ತು ರನ್ಟೈಮ್. ಚಿತ್ರದಲ್ಲಿ ಅನೇಕ ವಿಷಯಗಳು ಪುನರಾವರ್ತನೆಯಾದ ಆಧಾರದ ಮೇಲೆ ಈ ಚಿತ್ರವು ಹೆಚ್ಚು ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಸಿನಿಮಾ ವೀಕ್ಷಿಸಿದವರು ಚಿತ್ರದ ರನ್ಟೈಂ ಕೂಡ ಜಾಸ್ತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಇಂಡಿಯನ್ 2 ಸಿನಿಮಾ ತಯಾರಕರು 12 ನಿಮಿಷ ದೃಶ್ಯಗಳನ್ನು ಕಟ್ ಮಾಡಿದ್ದಾರೆ(ತೆಗೆದುಹಾಕಿದ್ದಾರೆ). ಇಂಡಿಯನ್ 2 ಯು/ಎ ಪ್ರಮಾಣಪತ್ರದೊಂದಿಗೆ ಸೆನ್ಸಾರ್ ಆಗಿತ್ತು . ಟೀಮ್ ಮಾಡುವ ಮೊದಲು ಮೂರು ಗಂಟೆ ನಾಲ್ಕು ನಿಮಿಷಗಳ ರನ್ಟೈಂ ಹೊಂದಿತ್ತು. ಪ್ರಸ್ತುತ ಈಗ ಎರಡು ಗಂಟೆ 52 ನಿಮಿಷ್ ರನ್ಟೈಮ ಹೊಂದಿದೆ. ಸ್ವತಃ ಇಂಡಿಯನ್ 2 ಸಿನಿಮಾದ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಈ ಸುದ್ದಿಯನ್ನು ಖಚಿತಪಡಿಸಿದೆ.
ರನ್ಟೈಂ ಕಡಿಮೆಯಾಗಿರುವ ಇಂಡಿಯನ್ 2 ಸಿನಿಮಾ ‘ಬುಧವಾರ (ಜುಲೈ 17) ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ತಯಾರಕರ ಈ ದೊಡ್ಡ ನಿರ್ಧಾರವು ಯಾವ ರೀತಿ ಪ್ರಯೋಜನವನ್ನು ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ. ಕಮಲ್ ಹಾಸನ್ ಸೇರಿ ಸಿದ್ಧಾರ್ಥ್, ಪ್ರಿಯಾ ಭವಾನಿ ಶಂಕರ್, ರಾಕುಲ್ ಪ್ರೀತ್ ಸಿಂಗ್, ನೆಡುಮುಡಿ ವೇಣು, ವಿವೇಕ್, ಬಾಬಿ ಸಿಂಹ ಪ್ರಮುಖ ತಾರಾಗಣದಲ್ಲಿದ್ದಾರೆ. ಇಂಡಿಯನ್ 3 ಚಿತ್ರೀಕರಣವನ್ನು ಚಿತ್ರತಂಡ ಸಹ ಪೂರ್ಣಗೊಳಿಸಿದೆ. ಈ ಚಿತ್ರವು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. (ಏಜೆನ್ಸೀಸ್)