ನ್ಯೂಸ್

ವಿವಾದಾತ್ಮ ಹೇಳಿಕೆ ಬೆನ್ನಲ್ಲೇ ರಾಜ್ಯಸಭೆಗೆ ಪ್ರವೇಶಿಸಲು ರೆಡಿಯಾದ ಕಮಲ್​ ಹಾಸನ್​| kamal-haasan

ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಬೆಂಬಲದೊಂದಿಗೆ ರಾಜ್ಯಸಭೆಗೆ ಪ್ರವೇಶಿಸಲಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುನ್ನ ಚುನಾವಣಾ ಒಪ್ಪಂದದ ಪ್ರಕಾರ, ಕಮಲ್​ ಹಾಸನ್ ಅವರನ್ನು ಮೈತ್ರಿಕೂಟದ ಮೂಲಕ ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿಸಲಾಗುವುದು ಎಂದು ಡಿಎಂಕೆ ತಿಳಿಸಿದೆ.

kamal-haasan| ಥಗ್ ಲೈಫ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಬಗ್ಗೆ ಹೇಳಿಕೆ ನೀಡಿ ಕನ್ನಡಿಗರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಖ್ಯಾತ ನಟ ಕಮಲ್ ಹಾಸನ್​ಗೆ ಇದೀಗ ರಾಜ್ಯಸಭೆಯ ಟಿಕೆಟ್ ಸಿಕ್ಕಿದೆ.

ಡಿಎಂಕೆ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಸಲ್ಮಾ, ಪಿ. ವಿಲ್ಸನ್, ಎಸ್.ಆರ್. ಶಿವಲಿಂಗಂ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳಾಗಿ ಆಯ್ಕೆ ಆಗಿದ್ದಾರೆ. ಇದರ ಜೊತೆ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯಂ ಪಕ್ಷಕ್ಕೆ ಒಂದು ಸ್ಥಾನ ನೀಡಲಾಗಿದೆ. ಈ ಪಕ್ಷದಿಂದ ಕಮಲ್ ಹಾಸನ್ ಅವರನ್ನು ಆಯ್ಕೆ ಮಾಡಿರೋದಾಗಿ ಡಿಎಂಕೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್​ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ತಮಿಳುನಾಡಿನ ಡಿಎಂಕೆ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪಕ್ಷದ ಮೈತ್ರಿ ಕೂಟದ ಕಮಲ್ ಹಾಸನ್ ಹೆಸರು ಕೂಡ ಇದೆ.

(ಏಜೆನ್ಸೀಸ್)

ಕನ್ನಡ ಭಾಷೆಯ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ ಬಳಿಕ ಈ ವಿಷಯ ಹೊರಬಿದ್ದಿದೆ. ಅವರ ಮುಂಬರುವ ಚಿತ್ರ ಥಗ್ ಲೈಫ್‌ನ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ನೀಡಿದ ಈ ಹೇಳಿಕೆಗಳು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಕನ್ನಡ ಕಾರ್ಯಕರ್ತರು ಮತ್ತು ರಾಜಕೀಯ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿವೆ. ತಮ್ಮ ಚಿತ್ರ ಥಗ್ ಲೈಫ್ ಬಿಡುಗಡೆಗೆ ಕೆಲವೇ ವಾರಗಳ ಮೊದಲು "ಕನ್ನಡ ತಮಿಳಿನಿಂದ ಹುಟ್ಟಿದೆ" ಎಂದು ನಟ ವಿವಾದವನ್ನು ಸೃಷ್ಠಿಸಿದ್ದಾರೆ.