ಕಲ್ಕಿ ಚಿತ್ರವು 12 ದಿನಗಳಲ್ಲಿ ಪ್ರಮುಖ ವ್ಯಾಪಾರ ಸಂಸ್ಥೆಗಳಿಂದ ರೂ. 521.4 ಕೋಟಿ ಸಂಗ್ರಹಿಸಿದೆ. ಭಾಷಾವಾರು ಕಲೆಕ್ಷನ್ ಈ ರೀತಿ ಇದೆ: ತೆಲುಗಿನಿಂದ 249.05 ಕೋಟಿ, ತಮಿಳಿನಿಂದ 30.5 ಕೋಟಿ, ಹಿಂದಿಯಿಂದ 218.9 ಕೋಟಿ, ಕನ್ನಡದಿಂದ 4.15 ಕೋಟಿ, ಮತ್ತು ಮಲಯಾಳಂನಿಂದ 18.8 ಕೋಟಿ.
'ಕಲ್ಕಿ 2898 AD' ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ರೆಸ್ಪಾನ್ಸ್ ಸಿಗ್ತಿಲ್ಲ. ಕೆಲವರಿಗೆ ಸಿನಿಮಾ ಇಷ್ಟವಾಗಲೇ ಇಲ್ಲ. ಆದರೂ ಯಾವುದೇ ದೊಡ್ಡ ಸಿನಿಮಾ ಇಲ್ಲ ಎನ್ನುವ ಕಾರಣಕ್ಕೆ 'ಕಲ್ಕಿ 2898 AD' ನೋಡುವಂತಾಗಿದೆ. ಎರಡು ವಾರಗಳಲ್ಲಿ ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ.
ಯಾವುದೇ ದೊಡ್ಡ ಸಿನಿಮಾ ಇಲ್ಲ ಎನ್ನುವ ಕಾರಣಕ್ಕೆ 'ಕಲ್ಕಿ 2898 AD' ನೋಡುವಂತಾಗಿದೆ. ಎರಡು ವಾರಗಳಲ್ಲಿ ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ.
ಸಿನಿಮಾ ಒಂದು ರೀತಿಯ ನಿರೀಕ್ಷೆ ಹುಟ್ಟಾಕ್ಕಿತ್ತು. ಆದರೆ ತೆರೆಮೇಲೆ ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. ಕೊನೆ ಅರ್ಧ ಗಂಟೆ ಬಿಟ್ಟರೆ ಸಿನಿಮಾದಲ್ಲಿ ಏನೂ ಇಲ್ಲ ಎಂದು ಸಾಕಷ್ಟು ಜನ ಬಹಿರಂಗವಾಗಿಯೇ ಹೇಳುತ್ತಿದ್ದಾರೆ.
ಅಶ್ವತ್ಥಾಮನ ಪಾತ್ರದಲ್ಲಿ ಅಮಿತಾಬ್ ಅಭಿನಯಕ್ಕೆ ಬಹುಪರಾಕ್ ಎನ್ನಲಾಗ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಿಗ್‌ಬಿಗೆ ಇಂತಹ ಪಾತ್ರ ಸಿಕ್ಕಿರಲಿಲ್ಲ.
ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಕರ್ಣನ ಗೆಟಪ್‌ನಲ್ಲಿರುವ ಪೋಸ್ಟರ್ ಅನ್ನುವ ಪ್ರಭಾಸ್ ಹಂಚಿಕೊಂಡಿದ್ದಾರೆ. ಆದರೆ ಅದರಲ್ಲಿ 1000 ಕೋಟಿ ರೂ. ಕಲೆಕ್ಷನ್ ಎಂದು ನಮೂದಿಸಿಲ್ಲ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಸಿನಿಮಾ ಅಷ್ಟು ಕಲೆಕ್ಷನ್ ಮಾಡಿಲ್ಲ, ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಸರಿಯಾದ ಲೆಕ್ಕ ಪ್ರಭಾಸ್‌ಗೆ ಗೊತ್ತು. ಅದೇ ಕಾರಣಕ್ಕೆ 1000 ಕೋಟಿ ರೂ. ಕಲೆಕ್ಷನ್ ಪೋಸ್ಟರ್ ಹಂಚಿಕೊಂಡಿಲ್ಲ ಎಂದು ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ.