ನ್ಯೂಸ್

KEA ಪರೀಕ್ಷಾ ಅಕ್ರಮ: ಚಾಪೆ ತಿರಸ್ಕರಿಸಿ ನೆಲದ ಮೇಲೆಯೇ ಮಲಗಿದ ಆರೋಪಿ ಪಾಟೀಲ್‌

ಬೆಂಗಳೂರು: ಕಳೆದ ತಿಂಗಳು ನಡೆದ ಕರ್ನಾಟ ಪರೀಕ್ಷಾ ಪ್ರಾಧಿಕಾರ(ಕೆಇಎ) ವಿವಿಧ ನಿಗಮ, ಮಂಡಳಿಗಳಲ್ಲಿನ ಖಾಲಿ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್​​​ ಬಳಲಿ ಅಕ್ರಮ ಎಸಗಲಾಗಿತ್ತು. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಸೆರೆ ಸಿಕ್ಕ ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಪೊಲೀಸ್​​ ಠಾಣೆಯಲ್ಲಿ ಚಾಪೆ ತಿರಸ್ಕರಿಸಿ ನೆಲದ ಮೇಲೆ ನಿದ್ದೆ ಮಾಡಿದ್ದಾರೆ ಎನ್ನಲಾಗಿದೆ.

ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಕಲಬುರಗಿಯ ಅಶೋಕ ನಗರ ಠಾಣೆಯಲ್ಲಿ ಇರಿಸಲಾಗಿದ್ದು, ಶುಕ್ರವಾರ ಇಡೀ ರಾತ್ರಿ ಆತ ಲಾಕಪ್‌ನಲ್ಲೇ ಕಳೆದ. ಲಾಕಪ್‌ನಲ್ಲಿ ಚಾಪೆ ಇದ್ದರೂ ಸಹ ಈತ ಫರಸಿ ಮೇಲೆಯೇ ಮಲಗಿದ್ದ. ಇಡೀ ರಾತ್ರಿ ಲಾಕಪ್‌ನಲ್ಲಿ ಇದ್ದ. ಅಲ್ಲೇ ಮಾತ್ರೆಗಳನ್ನು ಸೇವಿಸಿದ. ಅಲ್ಲದೆ, ಆತನಲ್ಲಿ ಚಿಂತೆ, ಆತಂಕದ ಮುಖಭಾವ ಇತ್ತು ಎಂದು ಮೂಲಗಳು ಹೇಳಿವೆ.

ಲಾಕಪ್‌ ಒಳಗೆ ಪ್ರವೇಶ ಮಾಡುತ್ತಿದ್ದಂತಯೇ ಆರ್‌.ಡಿ,ಪಾಟೀಲ್‌, ತನಗೆ ಎದೆ ನೋವು, ತಲೆ ನೋವು, ಮೈಕೈ ನೋವು ಎಂದು ದೂರಿದ. ಅಲ್ಲದೆ, ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲು ಆಗ್ರಹಿಸಿದ. ಆದರೆ, ಪೊಲೀಸರು ಈತನ ಯಾವುದೇ ನೆಪಗಳಿಗೆ ಸೊಪ್ಪು ಹಾಕದೆ ತಕ್ಷಣ ವೈದ್ಯರೊಬ್ಬರನ್ನು ಇಲ್ಲಿಗೆ ಕರೆಸಿ, ಆತನ ಆರೋಗ್ಯ ಸಂಬಂಧಿ ದೂರುಗಳಿಗೆಲ್ಲ ಅಲ್ಲೇ ಚಿಕಿತ್ಸೆ ಕೊಡಿಸಿದ್ದಾರೆ.