ರಾಣೆಬೆನ್ನೂರ: ಕಾಕಿ ಜನಸೇವಾ ಟ್ರಸ್ಟ್ ವತಿಯಿಂದ ಡಿ. 23ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ರಾಣೆಬೆನ್ನೂರ ಜೇಸಿವಾಣಿ ಅರಮನೆಯ ಪ್ರಾರಂಭೋತ್ಸವ, ಶ್ರೀ ನೀಲಕಂಠೇಶ್ವರ ಸ್ವಾಮಿಯ ಕಾತಿರ್ಕೋತ್ಸವ ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಶ್ರೀನಿವಾಸ ಕಾಕಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆಯವರ ಕಾಲದಿಂದಲೂ ಸಮಾಜದಲ್ಲಿನ ಬಡವರಿಗಾಗಿ ರಿಯಾಯತಿ ದರದಲ್ಲಿ ನಿವೇಶನಗಳನ್ನು ನೀಡುತ್ತಾ ಬರಲಾಗಿದೆ. ಇದಲ್ಲದೆ ಈ ಹಿಂದೆ ಸ್ಥಳಿಯ ಜೇಸಿ ಘಟಕದ ಅಧ್ಯಕ್ಷನಾಗಿ ಸಮಾಜದ ಎಲ್ಲ ವರ್ಗದ ಜನರಿಗಾಗಿ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವೆ. ಈಗಾಗಲೇ ಎರೇಕುಪ್ಪಿ ರಸ್ತೆ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಅರಮನೆ ಮಾದರಿ ಕಲ್ಯಾಣ ಮಂಟಪ ನಿಮಿರ್ಸಿದ್ದು ರಿಯಾಯತಿ ದರದಲ್ಲಿ ಜನರಿಗೆ ವಿವಿಧ ಸಮಾರಂಭ ಆಯೋಜಿಸಲು ನೀಡಲಾಗುತ್ತಿದೆ.
ಇದೀಗ ಹುಣಸಿಕಟ್ಟಿ ರಸ್ತೆಯಲ್ಲಿ ಜೇಸಿವಾಣಿ ಅರಮನೆ ಹೆಸರಿನಲ್ಲಿ ಆಧುನಿಕ ಶೈಲಿಯ ಕಲ್ಯಾಣ ಮಂಟಪ ನಿಮಿರ್ಸಿದ್ದು ಡಿ. 23ರಂದು ಕಾರ್ಯಾರಂಭಗೊಳ್ಳಲಿದೆ. ಡಿ. 22ರಂದು ಸಂಜೆ 6ಕ್ಕೆ ವಧು ವರರ ಮೆರವಣಿಗೆ ನಡೆಯಲಿದೆ ಎಂದರು.
ಪ್ರಮುಖರಾದ ರೂಪಾ ಕಾಕಿ, ಅಮಿತ್ ಕಾಕಿ, ಅಂಕಿತಾ ಕಾಕಿ, ಶಿವಾನಂದ ಬಗಾದಿ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಶಿವಣ್ಣ ಬಣಕಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.