ಖ್ಯಾತ ನಟಿ ಕಾಜಲ್ ರಾಘವಾನಿ ಬೋಜ್‌ಪುರಿ ಸೂಪರ್‌ಸ್ಟಾರ್ ಪವನ್ ಸಿಂಗ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಕೈಸೆ ಹೋ ಜಾಲಾ ಪ್ಯಾರ್ ಸಿನಿಮಾದ ಶೂಟಿಂಗ್ ವೇಳೆ ನಡೆದ ಕಿಸ್ಸಿಂಗ್ ದೃಶ್ಯದ ಘಟನೆಯನ್ನು ನೆನಪಿಸಿಕೊಂಡಿರುವ ಅವರು, ಈ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಹೀರೋ ಸೆಟ್‌ಗೆ ಬಂದು, ನಾನು ಇಲ್ಲೊಂದು ಕಿಸ್ಸಿಂಗ್ ದೃಶ್ಯ ಮಾಡುತ್ತೇನೆ ಎಂದು ನಿರ್ಧರಿಸಿದರೆ, ಸುತ್ತಲಿರುವವರೆಲ್ಲ ಸರಿ ಭೈಯ್ಯಾ, ಸರಿ ಭೈಯ್ಯಾ ಎಂದು ತಲೆಯಾಡಿಸುತ್ತಾರೆ. ಆದರೆ ಆ ನಟಿಗೆ ಇದು ಇಷ್ಟವಿದೆಯೇ ಇಲ್ಲವೇ ಎಂದು ಯಾರೂ ಕೇಳುವುದಿಲ್ಲ. ನಾನು ದೃಶ್ಯ ಮಾಡಲು ನಿರಾಕರಿಸಿದಾಗ ಅವರು ಸೆಟ್ ತೊರೆದು ಹೊರಟುಹೋದರು ಎಂದು ಕಾಜಲ್ ಬಹಿರಂಗಪಡಿಸಿದ್ದಾರೆ.
ಸಮ್ಮತಿ ಮತ್ತು ಗೌರವದ ಕುರಿತು ಕಾಜಲ್ ಮಾತು
ಈ ಘಟನೆಯ ನಂತರ ತಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವುದನ್ನು ನಿಲ್ಲಿಸಿದೆವು ಎಂದು ಕಾಜಲ್ ತಿಳಿಸಿದ್ದಾರೆ. ಇನ್ಮುಂದೆ ತಮ್ಮೊಂದಿಗೆ ನಟಿಸುವುದಿಲ್ಲ ಎಂದು ಪವನ್ ಸಿಂಗ್ ಹೇಳಿದ್ದಾಗ, ಅವರ ಆ ನಿರ್ಧಾರವನ್ನು ಒಪ್ಪಿಕೊಳ್ಳಲು ತಾವು ಸಿದ್ಧರಾಗಿದ್ದಾಗಿಯೂ ಕಾಜಲ್ ರಾಘವಾನಿ ಸ್ಪಷ್ಟಪಡಿಸಿದ್ದಾರೆ