ಕೈಲಾಂಚ: ಮೇಕೆದಾಟು ಯೋಜನೆ ಅನುಷ್ಠಾನದ ವಿಷಯದಲ್ಲಿ ತಮಿಳುನಾಡು ಕಾಂಗ್ರೆಸ್ ವಿರೋಧ ವಾಡಲಿ ಬಿಡಲಿ, ರಾಜ್ಯದ ಹಿತಕ್ಕಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟ ಕೇವಲ ಜಿಲ್ಲೆಗೆ ಸೀಮಿತವಾಗಿಲ್ಲ. ಪಕ್ಷಾತೀತವಾಗಿದ್ದು ಕಾಂಗ್ರೆಸ್ ನೇತೃತ್ವ ವಹಿಸಿದೆ ಅಷ್ಟೇ. ಬದಲಾಗಿ ರಾಜ್ಯದ ಹಿತದೃಷ್ಟಿಯಿಂದ ಯೋಜನೆ ಸಾಕಾರಗೊಳಿಸಲು ಪಕ್ಷ ಬದ್ಧವಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯಲ್ಲಿ ಮಂಗಳವಾರ ನಡೆದ ಕೈಲಾಂಚ - ಹಾರೋಹಳ್ಳಿ -ಮರಳವಾಡಿ ಹೋಬಳಿಗಳ ಗ್ರಾಪಂ ವ್ಯಾಪ್ತಿಯ ಮುಖಂಡರನ್ನು ಒಳಗೊಂಡ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ವಾತನಾಡಿ, ಮೇಕೆದಾಟು ಅಣೆಕಟ್ಟು ನಿರ್ವಾಣ ವಾಡಬೇಕೆಂದು ಒತ್ತಾಯಿಸಿ ಜ.9ರಂದು ಮೇಕೆದಾಟುವಿನಿಂದ ಬೆಂಗಳೂರಿನವರೆಗೆ 10 ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಆರು ದಿನಗಳ ಪಾದಯಾತ್ರೆ ಸಾಗಲಿದ್ದು, ಹೆಚ್ಚಿನ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮೇಕೆದಾಟು ಹೋರಾಟ ಪಕ್ಷಾತೀತವಾಗಿದ್ದು, ಕಾಂಗ್ರೆಸ್ ಕೇವಲ ನೇತೃತ್ವ ವಹಿಸಿಕೊಂಡಿದೆ.
ಇದು ನಾಡಿನ ಜನರ ಒಳಿತಿಗಾಗಿ ಹಮ್ಮಿಕೊಂಡಿರುವ ಪಾದಯಾತ್ರೆಯಾಗಿದೆ. ನಾಡು ನುಡಿ, ಜಲ, ಗಡಿ ಸಮಸ್ಯೆಗಳನ್ನಿಟ್ಟುಕೊಂಡು ಹೋರಾಟ ವಾಡುತ್ತಿರುವ ವಿವಿಧ ಸಂಟನೆಗಳು, ಸಂ, ಸಂಸ್ಥೆಗಳು, ಮಠಾಧೀಶ್ವರರು, ವಿವಿಧ ಜಿಲ್ಲೆಯ ಜನರು ಭಾಗವಹಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುವಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ವಾಜಿ ಶಾಸಕ ಕೆ. ರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ನಗರಸಭೆ ಅಧ್ಯಕ್ಷೆ ಪಾರ್ವತಮ್ಮ, ನಗರಸಭಾ ಸದಸ್ಯ ಕೆ. ಶೇಷಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಹೆಚ್. ರಾಜು, ಮುಖಂಡರಾದ ಸಿ.ಎನ್.ಆರ್. ವೆಂಕಟೇಶ್, ಕೆ. ರಮೇಶ್, ಕಾಂತರಾಜ್ ಪಟೇಲ್, ಜಿ. ಮಹೇಂದ್ರ, ಮುತ್ತರಾಜು, ಎ.ಬಿ. ಚೇತನ್‌ಕುವಾರ್, ಹರೀಶ್‌ಕುಮರ್, ಶಿವಲಿಂಗೇಗೌಡ, ಜಯಣ್ಣ, ಜಯಲಕ್ಷತ್ಮೃಮ್ಮ, ನಿಜಾಂವುದ್ದೀನ್ ಷರೀಫ್, ಜಗದೀಶ್, ಕೈಲಾಂಚ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಹುಗು ಗ್ರಾಪಂ ಅಧ್ಯಕ್ಷೆ ತೇಜ, ಹುಣಸನಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜುಳ, ಗ್ರಾಪಂ ಸದಸ್ಯರಾದ ಪುಟ್ಟಸ್ವಾಮಿ, ನಾಗೇಶ್, ಮಹದೇವಯ್ಯ, ದಾಸೇಗೌಡ, ಹೇಮಂತ್, ಗಿರೀಶ್, ಧನರಾಜ್, ಎ.ಎಸ್. ಕುವಾರ್ ಮುಂತಾದ್ವರಿದ್ದರು.
ತಮಿಳುನಾಡಿಗೆ ಅನುಕೂಲ: ಮೇಕೆದಾಟು ಅಣೆಕಟ್ಟು ನಿರ್ವಾಣದಿಂದ ತಮಿಳುನಾಡಿಗೆ ಅನನುಕೂಲಕ್ಕಿಂತ ಅನುಕೂಲವೇ ಹೆಚ್ಚು. ನಿಯಮಿತವಾಗಿ ಆ ರಾಜ್ಯಕ್ಕೆ ನೀರು ಬಿಡಲು ಸಹಕಾರಿಯಾಗುತ್ತದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಅಣೆೆಕಟ್ಟು ನಿರ್ವಾಣದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಕೇವಲ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಅನುಮತಿ ನೀಡುವುದು ಬಾಕಿ ಇದೆ. ಅನೇಕ ಬಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಂಸದ ಸುರೇಶ್ ದೂರಿದರು.
ಕಡ್ಡಿ ನೆಟ್ಟವರೆಲ್ಲ ರೈತರಾಗುವುದಿಲ್ಲ: ಪಾದಯಾತ್ರೆ ಬಗ್ಗೆ ಲುವಾಗಿ ವಾತನಾಡುವ ಎಚ್.ಡಿ. ಕುವಾರಸ್ವಾಮಿ, ಅವರ ತಂದೆ ವಾಜಿ ಪ್ರಧಾನಿಗಳು ಆಗಾಗ ಪ್ರಧಾನ ಮಂತ್ರಿಯವರನ್ನು ಭೇಟಿ ವಾಡಿ ಬರುತ್ತಾರೆ. ಅಂತಹ ಸಂಧರ್ಭದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಏತಕ್ಕೆ ಒತ್ತಾಯಿಸಲಿಲ್ಲ ಎಂದು ಡಿ.ಕೆ. ಸುರೇಶ್ ಪ್ರಶ್ನಿಸಿದರು. ಪಂಚೆ ತೊಟ್ಟವರೆಲ್ಲ ರೈತರಲ್ಲ ಎಂದು ಕುವಾರಸ್ವಾಮಿ ಹೇಳಿರುವುದಕ್ಕೆ ಉತ್ತರ ನೀಡಿದ ಸುರೇಶ್, ನಿನ್ನೆ ಮೊನ್ನೆ ಹೋಗಿ ಕಡ್ಡಿ ನೆಟ್ಟವರೆಲ್ಲ, ಹೊಲ ಉತ್ತಿದವರೆಲ್ಲ ರೈತರಾಗುವುದಿಲ್ಲ. ಕೈ ನೋಡಿದರೆ ರೈತರು ಯಾರೆಂದು ಗೊತ್ತಾಗುತ್ತೆ ಎಂದು ಕುವಾರಸ್ವಾಮಿಗೆ ಚಾಟಿ ಬೀಸಿದರು.