ಕಡೂರು ಟೌನ್ ಕೋ ಅಪರೇಟಿವ್ ಸೊಸೈಟಿ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಕೆ.ಬಿ.ಸೋಮೇಶ್ ದಂಪತಿಯನ್ನು ಸನ್ಮಾನಿಸಲಾಯಿತು. ಕಲ್ಪನಾ, ಸುಶೀಲಾ, ಅಜೆಯ್ ಒಡೆಯರ್, ಕೆ.ಜಿ.ಲೋಕೇಶ್ವರ್, ಚಂದ್ರಶೇಖರ್, ನಾಗರಾಜ್, ಚನ್ನಕೇಶವ ಇತರರಿದ್ದರು. 
ನ್ಯೂಸ್

6.34 ಲಕ್ಷ ರೂ. ಲಾಭ

ಕಡೂರು: ಕಡೂರು ಟೌನ್ ಕೋ-ಆಪರೇಟಿವ್ ಸೊಸೈಟಿ 2023-24ನೇ ಸಾಲಿನಲ್ಲಿ 6.34 ಲಕ್ಷ ರೂ. ಲಾಭ ಗಳಿಸಿದ್ದು, ಷೇರುದಾರರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಕೆ.ಬಿ.ಸೋಮೇಶ್ ತಿಳಿಸಿದರು.
ಭಾನುವಾರ ಸಂಘದ 115ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಷೇರುದಾರರ ಸಹಕಾರದಿಂದ ಸೊಸೈಟಿ ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಪ್ರೋತ್ಸಾಹ ಕಾರಣ ಎಂದರು.
ಪ್ರಸಕ್ತ ವರ್ಷ 1 ಕೋಟಿ ರೂ. ಗೂ ಅಧಿಕ ಸಾಲ ನೀಡಲಾಗಿದೆ. ಪಿಗ್ಮಿ ಖಾತೆಗಳಿಂದ 1.56 ಕೋಟಿ ರೂ. ಸಂಗ್ರಹಿಸಲಾಗಿದ್ದು ಸಕಾಲದಲ್ಲಿ 1.51 ಕೋಟಿ ರೂ. ಪಿಗ್ಮಿ ಹಣ ವಾಪಸ್ ನೀಡಲಾಗಿದೆ ಎಂದರು.
ನಿರ್ದೇಶಕ ಕೆ.ಎಚ್.ರವಿ ಮಾತನಾಡಿ, ಸೊಸೈಟಿಯ ಬೆಳವಣಿಗೆಗೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಸಹಕಾರ ಹೆಚ್ಚಿನದಾಗಿದೆ ಎಂದು ಹೇಳಿದರು.
ಸಂಘದ ಷೇರುದಾರ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಉಪಾಧ್ಯಕ್ಷೆ ಕಲ್ಪನಾ ಲವ, ನಿರ್ದೇಶಕರಾದ ಕೆ.ಜಿ.ಶ್ರೀನಿವಾಸಮೂರ್ತಿ, ಸುಶೀಲಾ, ಕೆ.ಕೆ.ಮಂಜು, ಕೆ.ಜಿ.ಲೋಕೇಶ್ವರ್, ಅಜಯ್‌ಕುಮಾರ್ ಒಡೆಯರ್, ಆರ್.ಚಂದ್ರಶೇಖರ್, ಕೆ.ಜಿ.ಪ್ರದೀಪ್, ಪೈರೋಜ್ ಖಾನ್, ವಿ.ಎಂ.ಪ್ರಸಾದ್, ಟಿ.ಆರ್.ರೇಣುಕಪ್ಪ, ಇಂದ್ರಾ ಹೇಮರಾಜ್, ಎಂ.ಉಪೇಂದ್ರನಾಥ್, ಬಿ.ಎಲ್.ಕುಮಾರ್, ವೆಂಕಟೇಶ್, ಹೂವಿನಮಂಡಿ ನಾಗರಾಜ್, ಚನ್ನಕೇಶವಮೂರ್ತಿ ಇದ್ದರು.