ಬಾಳೆಹೊನ್ನೂರು ಸಮೀಪದ ಕಡವಂತಿಗೆ ಆಗಮಿಸಿದ ಸಂವಿಧಾನ ಜಾಗೃತಿ ರಥಯಾತ್ರೆಯನ್ನು ಗ್ರಾಮಸ್ಥರು ಬರಮಾಡಿಕೊಂಡರು. ಧನಲಕ್ಷ್ಮೀ, ರಮೇಶ್, ಶ್ರೀನಿವಾಸ್, ಗೋಪಾಲ, ಯೋಗೀಶ್ ಇದ್ದರು. 
ನ್ಯೂಸ್

ಕಡವಂತಿಗೆ ಸಂವಿಧಾನ ಜಾಗೃತಿ ರಥ

ಬಾಳೆಹೊನ್ನೂರು: ರಾಜ್ಯ ಸರ್ಕಾರ, ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿರುವ ಸಂವಿಧಾನ ಜಾಗೃತಿ ರಥಯಾತ್ರೆ ಸೋಮವಾರ ಖಾಂಡ್ಯ ಹೋಬಳಿಯ ಕಡವಂತಿ ಗ್ರಾಪಂ ವ್ಯಾಪ್ತಿಗೆ ಆಗಮಿಸಿ ಗ್ರಾಮದಲ್ಲಿ ಸಂಚರಿಸಿತು.
ಸ್ಥಳೀಯ ದಲಿತ ಸಂಘರ್ಷ ಸಮಿತಿ ಸದಸ್ಯರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ರಥವನ್ನು ಗ್ರಾಮಕ್ಕೆ ಬರ ಮಾಡಿಕೊಂಡರು.
ಕಡವಂತಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ರಥಕ್ಕೆ ಪುಷ್ಪಾರ್ಚನೆ ಮಾಡಿ ಸಂವಿಧಾನದ ಕುರಿತು ಮಾತನಾಡಿದರು. ಕಡವಂತಿ ಕಲಾ ತಂಡದವರು ನಾಸಿಕ್ ಡೋಲ್ ಪ್ರದರ್ಶನ ಮಾಡಿದರು.
ಖಾಂಡ್ಯ ಹೋಬಳಿ ಡಿಎಸ್‌ಎಸ್ ಅಧ್ಯಕ್ಷ ಬಿ.ಕೆ.ರಮೇಶ್, ಪ್ರಮುಖರಾದ ಬಿ.ಎಂ.ಶ್ರೀನಿವಾಸ್ ಬಾಸಾಪುರ, ಬಿ.ಎಂ.ಗೋಪಾಲ, ಯೋಗೀಶ್, ಹರೀಶ್, ಹೇಮಂತ್, ಮನೋಜ್, ಗಣೇಶ್, ಪೂರ್ಣೇಶ್, ಐಯ್ಯಣ್ಣ, ರಾಕೇಶ್, ನಾಗರಾಜ್, ವಿಜಯಶ್ರೀ, ಲತಾ, ಮಹೇಶ್ ಕಡವಂತಿ, ಕೃಷ್ಣಮೂರ್ತಿ, ಅಣ್ಣಪ್ಪಶೆಟ್ಟಿ ಮತ್ತಿತರರಿದ್ದರು.