ನ್ಯೂಸ್

ಕೆಸೆಟ್-23 ಅರ್ಜಿ ಸಲ್ಲಿಕೆ ಅವಧಿ ಸೆ.9ರ ವರೆಗೆ ವಿಸ್ತರಣೆ, ಅರ್ಜಿ ಸಲ್ಲಿಸಲು ಮತ್ತಷ್ಟು ಅವಕಾಶ

ಬೆಂಗಳೂರು ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗಾಗಿ ನಡೆಯಲಿರುವ ಕೆಸೆಟ್-23 ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅ.9ರ ವೆರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ಅ.3ರ ಸಂಜೆ 5 ಗಂಟೆಯವರೆಗೆ ಇದ್ದ ಕಾಲಾವಕಾಶವನ್ನು ಅ.9ರ ಸಂಜೆ 5 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

ಡಿಜಿಟಲೀಕರಣಗೊಂಡ ಅಂಚೆ ಕಚೇರಿಗಳ ಮೂಲಕ ಶುಲ್ಕ ಪಾವತಿಸಲು ಅ.11ರ ವರೆಗೆ ಅವಕಾಶವಿದೆ ಎಂದು ಸ್ಪಷ್ಟಪಡಿಸಲಾಗಿದೆ. ವಿವರ ಅಧಿಸೂಚನೆ, ಪಠ್ಯಕ್ರಮ ಮತ್ತು ಅರ್ಜಿಯ ಕೊಂಡಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಸಿಗುತ್ತವೆ.