ಹೈದ್ರಾಬಾದ್: ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ಜ್ಯೋತಿ ರೈ ಒಂದಲ್ಲಾ ಒಂದು ವಿಚಾರವಾಗಿ ಸಖತ್ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ನಟಿ ಇದೀಗ 1 ಸಾವಿರ ಜನರ ಅಕೌಂಟ್‌ಅನ್ನು ಬ್ಲ್ಆಕ್ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರಿಂದ ಕೊಂಚ ಇರಿಸುಮುರಿಸುಗೆ ಒಳಗಾಗಿದ್ದ ನಟಿ, ಬಳಿಕ ಈ ವಿಚಾರವಾಗಿ ಸೈಬರ್ ಕ್ರೈಮ್‌ಗೆ ದೂರು ಕೂಡ ನೀಡಿದ್ದರು. ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಜ್ಯೋತಿ ರೈ ಬ್ಯೂಟಿ ಬಗ್ಗೆ ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಅಶ್ಲೀಲ ಕಾಮೆಂಟ್ ಮಾಡಿದ್ದರು. ಈ ಕುರಿತಾಗಿ ನಟಿ ಒಂದು ನಿರ್ಧಾರಕ್ಕೆ ಬಂದಿದ್ದಾರಂತೆ.
‘ಇನ್‌ಸ್ಟಾಗ್ರಾಮ್ ಬ್ಲಾಕ್ ಫೀಚರ್‌ಅನ್ನು ನಾನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ಕಮೆಂಟ್ ಸೆಕ್ಷನ್‌ನಲ್ಲಿ ಕೆಟ್ಟ ಹಾಗೂ ಅಗೌರವದಿಂದ ಮೆಸೇಜ್ ಮಾಡುವ ಮೂಲಕ ಕೆಟ್ಟ ವರ್ತನೆ ತೋರಿದ್ದ 1 ಸಾವಿರಕ್ಕೂ ಅಧಿಕ ವೈಯಕ್ತಿಕ ಖಾತೆಗಳನ್ನು ನಾನು ತೆಗೆದುಹಾಕಿದ್ದೇನೆ. ಅವರೊಂದಿಗೆ ಮಾತುಕತೆ ಮಾಡುವ ಮೂಲಕ ಚರ್ಚೆ ಮಾಡೋದು ನನಗೆ ಇಷ್ಟವಿಲ್ಲ. ಧನಾತ್ಮಕ ಪರಿಸರವನ್ನು ರಚನೆ ಮಾಡಲು ನೀವೂ ಕೂಡ ಇಂಥ ಟೂಲ್‌ಗಳನ್ನು ಬಳಕೆ ಮಾಡಿ. ಈ ವಿಚಾರದಲ್ಲಿ ಯಾರಾದರೂ ಕಲಿಯಬೇಕು ಎಂದಿದ್ದರೆ, ಅದಕ್ಕೆ ನಾನು ಸ್ವಾಗತ ನೀಡುತ್ತಿದ್ದೇನೆ.’ ಎಂದು ಅವರು ಬರೆದುಕೊಂಡಿದ್ದಾರೆ.
ತಮ್ಮ ಪ್ರೊಫೈಲ್‌ಗೆ ಬರುತ್ತಿದ್ದ ಅಶ್ಲೀಲ ಹಾಗೂ ಕೆಟ್ಟ ಮೆಸೇಜ್‌ಗಳಿಂದ ಹೈರಾಣಾಗಿದ್ದ ಜ್ಯೋತಿ ರೈ ದೊಡ್ಡ ನಿರ್ಧಾರ ಮಾಡಿದ್ದಾರೆ. ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.