ಎನ್.ಆರ್.ಪುರದ ಸೀಗುವಾನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜೆಸಿ ಸಂಸ್ಥೆ ವತಿಯಿಂದ ಕುರ್ಚಿ ಹಾಗೂ ವಾಟರ್ ಫಿಲ್ಟರ್‌ನ್ನು ಕೊಡುಗೆಯಾಗಿ ನೀಡಲಾಯಿತು. ಎಚ್.ಎಸ್.ಪೂರ್ಣೇಶ್, ಕೆ.ಗಂಗಾಧರ್, ವಿಜಯಕುಮಾರ್,ಮಿಥುನ್ ಇದ್ದರು. 
ನ್ಯೂಸ್

ಜ್ವಾಲಾಮಾಲಿನಿ ಜೇಸಿ ಶಾಲೆಗಳಿಗೆ ಕುರ್ಚಿ ಕೊಡುಗೆ

ಎನ್.ಆರ್.ಪುರ: ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಹಲವಾರು ವರ್ಷಗಳಿಂದ ಬಡ ಮಕ್ಕಳಿಗೆ, ಶಾಲೆಗಳಿಗೆ ವಿವಿಧ ಪರಿಕರಗಳನ್ನು ನೀಡುತ್ತಿದೆ ಎಂದು ಸಂಸ್ಥೆ ಪೂರ್ವಾಧ್ಯಕ್ಷ ಪೂರ್ಣೇಶ್ ಹೇಳಿದರು.
ಸಂಸ್ಥೆಯಿಂದ ಸೀಗುವಾನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕುರ್ಚಿಗಳು ಹಾಗೂ ವಾಟರ್ ಫಿಲ್ಟರ್‌ನ್ನು ಕೊಡುಗೆಯಾಗಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಬಾರಿ ಜೇಸಿ ಸಂಸ್ಥೆ ಅಧ್ಯಕ್ಷ ಕೆ.ಗಂಗಾಧರ್ ಅವರು ವೈಯಕ್ತಿಯಕ ಕೊಡುಗೆಯಾಗಿ ಕುರ್ಚಿ ಹಾಗೂ ವಾಟರ್ ಫಿಲ್ಟರ್ ನೀಡಿದ್ದಾರೆ. ಶಾಲೆಗಳಿಗೆ ದಾನ ನೀಡುವುದರಿಂದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದರು.
ಜೇಸಿ ಸಂಸ್ಥೆಯ ಕಾರ್ಯದರ್ಶಿ ಮಿಥುನ್ ಮಾತನಾಡಿ, ನಮ್ಮ ಜೇಸಿ ಸಂಸ್ಥೆ 33 ವರ್ಷಗಳಿಂದ ಸಾರ್ವಜನಿಕರಿಗೆ, ಬಡ ಜನರಿಗೆ,ಶಾಲಾ ಮಕ್ಕಳಿಗೆ ಹಾಗೂ ರೋಗಿಗಳಿಗೆ ಸೇವೆ ನೀಡುತ್ತಿದೆ ಎಂದರು.
ಕ್ಷೇತ್ರ ಸಮನ್ವಯ ಸಂಪನ್ಮೂಲ ವ್ಯಕ್ತಿ ವಿಜಯಕುಮಾರ್ ಮಾತನಾಡಿ, ಜೇಸಿ ಸಂಸ್ಥೆಯು ಶುದ್ದ ಕುಡಿಯುವ ನೀರಿಗಾಗಿ ವಾಟರ್ ಫಿಲ್ಟರ್ ನೀಡಿರುವುದು ಸಂತಸ ತಂದಿದೆ. ಮಕ್ಕಳು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜೇಸಿ ಸದಸ್ಯ ವಿನೂತ್, ಎಸ್‌ಡಿಎಂಸಿ ಸದಸ್ಯ ದೇವರಾಜು, ಮುಖ್ಯಶಿಕ್ಷಕ ಮಂಜಪ್ಪ ಸಹ ಶಿಕ್ಷಕಿ ಸವೀನಾ ಉಪಸ್ಥಿತರಿದ್ದರು.