ನ್ಯೂಸ್

ಒಕ್ಕಲಿಗ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನ

ಬೆಂಗಳೂರು: ಜಸ್ಟೀಸ್ ಹೊಂಬೇಗೌಡ ಸೇವಾ ಸಮಿತಿ ಐ.ಟಿ.ಐ.(ರಿ) ಪ್ರತಿಬಾ ಪುರಸ್ಕಾರಕ್ಕಾಗಿ ಒಕ್ಕಲಿಗ ಜನಾಂಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಿದೆ.

2024ನೇ ಸಾಲಿನ ಪಿ.ಯು.ಸಿ.ಯಲ್ಲಿ ಶೇ.85 ಮೇಲ್ಪಟ್ಟು ಅಂಕ ಪಡೆದ ಯವುದೇ ಮೊದಲನೇ ಪದವಿ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಬಿಳಿಹಾಳೆಯಲ್ಲಿ ತಮ್ಮ ಹೆಸರು, ತಂದೆಯ ಹೆಸರು ಮತ್ತು ವಿಳಾಸ, ಮೊಬೈಲ್ ಸಂಖ್ಯೆ ಪದವಿ ವ್ಯಾಸಂಗ, ಕಾಲೇಜಿನ ವಿಳಾಸ, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ, ಪದವಿ ಕಾಲೇಜಿನ ಗುರುತಿನ ಚೀಟಿಯೊಂದಿಗೆ ಪಿ.ಯು.ಸಿ. ಅಂಕಪಟ್ಟಿ (ನಕಲು) ಭಾವಚಿತ್ರ ಲಗತ್ತಿಸಿದ ವಿವರ ಬರೆದು ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸೆ.30ರ ಒಳಗೆ ಕಳುಹಿಸತಕ್ಕದ್ದು.

ಬೆಂಗಳೂರು ನಗರ ಮತ್ತು ಗ್ರಾಮೀಣ, ರಾಮನಗರ, ಮಂಡ್ಯ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ವಿದ್ಯಾರ್ಥಿಗಳು ಮಾತ್ರ ಪುರಸ್ಕಾರಕ್ಕೆ ಅರ್ಹರು.

ಅರ್ಜಿ ಕಳುಹಿಸಬೇಕಾದ ವಿಳಾಸ : ವಿ.ಶ್ರೀನಿವಾಸ ಬಾಬು, ನಂ.28, 4ನೇ ಮುಖ್ಯರಸ್ತೆ, ಕೆ.ಹೆಚ್.ಎಂ. ಬ್ಲಾಕ್, ಗಂಗಾನಗರ, ಬೆಂಗಳೂರು - 560 032. ಹೆಚ್ಚಿನ ಮಾಹಿತಿಗೆ ದೂ : 9480796838 ಸಂಪರ್ಕಿಸಬಹುದು.