ನ್ಯೂಸ್

Devara OTT Release: ಮೊಬೈಲ್ ಪರದೆಯಲ್ಲಿ ಘರ್ಜಿಸಲಿದೆ 'ದೇವರ' - ಆನ್‌ಲೈನ್‌ ಸ್ಟ್ರೀಮ್ ಎಲ್ಲಿ, ಯಾವಾಗ?

ಹೈದರಾಬಾದ್​: ಜೂನಿಯರ್ ಎನ್​ಟಿಆರ್, ಸೈಫ್ ಅಲಿ ಖಾನ್, ಜಾನ್ವಿ ಕಪೂರ್ ಮುಂತಾದ ತಾರೆಯರು ನಟಿಸಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ದೇವರ' ಇತ್ತೀಚೆಗಷ್ಟೇ ವಿಶ್ವದಾದ್ಯಂತ ಬಿಡುಗಡೆಯಾಗಿ ಸದ್ದು ಮಾಡಿತ್ತು. ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿದ ಈ ಚಿತ್ರ ಗಳಿಕೆಯ ದೃಷ್ಟಿಯಿಂದಲೂ ಸೈ ಎನಿಸಿಕೊಂಡಿತ್ತು. ಈ ನಡುವೆ ದೇವರ ಒಟಿಟಿ ಬಿಡುಗಡೆ(Devara OTT Release)ಗೆ ಸಂಬಂಧಿಸಿದಂತೆ ಅನೇಕ ಚರ್ಚೆಗಳು ನಡೆಯುತ್ತಿವೆ.

ಇತ್ತೀಚಿನ ದಿನಗಳಲ್ಲಿ ಚಿತ್ರಗಳು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಒಂದು ತಿಂಗಳಲ್ಲೇ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಬರುವುದು ಸಾಮಾನ್ಯವಾಗಿದೆ. ಅದೇ ರೀತಿ ದೇವರ ಕೂಡ ಬಹುತೇಕ ಒಟಿಟಿಗೆ ಬರಲು ಸಜ್ಜಾಗಿದೆ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿವೆ.

ಕೊರಟಲ ಶಿವ ನಿರ್ದೇಶಿಸಿದ ದೇವರ ಆನ್‌ಲೈನ್‌ನಲ್ಲಿ ಯಾವಾಗ ಮತ್ತು ಎಲ್ಲಿ ಬಿಡುಗಡೆಯಾಗುತ್ತದೆ? ಯಾವ ಒಟಿಟಿ ಪ್ಲಾಟ್‌ಫಾರ್ಮ್ ಸ್ಟ್ರೀಮ್ ಮಾಡಬಹುದು ಎಂಬುದರ ಕುರಿತು ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿದೆ.

ಮಾಹಿತಿ ಪ್ರಕಾರ ದೇವರ ನವೆಂಬರ್ 8 ರಂದು ಪ್ರಸಿದ್ಧ ಒಟಿಟಿ ಪ್ಲಾಟ್‌ಫಾರ್ಮ್ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್ ಮಾಡಬಹುದು ಎನ್ನಾಗುತ್ತಿದೆ. ಏಕೆಂದರೆ ಚಿತ್ರದ ಡಿಜಿಟಲ್ ಹಕ್ಕುಗಳು ಈ ವೇದಿಕೆಯಲ್ಲಿವೆ.

ದೇವರ ತೆಲುಗು, ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಬಹುದು. ಆದರೂ ಈ ವಿಷಯದ ಬಗ್ಗೆ ತಯಾರಕರು ಇನ್ನಷ್ಟೇ ಅಧಿಕೃತ ಪ್ರಕಟಣೆಯನ್ನು ಮಾಡಬೇಕಾಗಿದೆ.

ದೇವ್ರ ವಿಶ್ವದಾದ್ಯಂತ ಬಿಡುಗಡೆಯಾದ 23 ದಿನಗಳಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.