ರಾಷ್ಟ್ರೀಯ ಜೂ. ಈಜು: ಕರ್ನಾಟಕಕ್ಕೆ ಮತ್ತೆ 4 ಚಿನ್ನದ ಪದಕ 
ನ್ಯೂಸ್

ರಾಷ್ಟ್ರೀಯ ಜೂ. ಈಜು: ಕರ್ನಾಟಕಕ್ಕೆ ಮತ್ತೆ 4 ಚಿನ್ನದ ಪದಕ

ಬೆಂಗಳೂರು: ಕರ್ನಾಟಕದ ಈಜುಪಟುಗಳು ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 52ನೇ ರಾಷ್ಟ್ರೀಯ ಜೂನಿಯರ್​ ಈಜು ಚಾಂಪಿಯನ್​ಷಿಪ್​ನ (

junior national championship

) 3ನೇ ದಿನ ಮತ್ತೆ 4 ಚಿನ್ನ, 4 ಬೆಳ್ಳಿ ಸಹಿತ 8 ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಕರ್ನಾಟಕ ಕೂಟದಲ್ಲಿ ಒಟ್ಟು 21 ಚಿನ್ನ, 16 ಬೆಳ್ಳಿ, 6 ಕಂಚಿನ ಸಹಿತ ಒಟ್ಟು 43 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.


ಗುರುವಾರ ನಡೆದ ಸ್ಪರ್ಧೆಗಳಲ್ಲಿ ರಾಜ್ಯದ ತಾನ್ಯಾ ಷಡಾಕ್ಷರಿ, ಮಾನವಿ ವರ್ಮ ಮತ್ತು ಶರಣ್​ ಎಸ್​. ಚಿನ್ನದ ಪದಕ ಜಯಿಸಿದರು. ಬಾಲಕಿಯರ 4/100 ಮೀ. ಫ್ರೀಸ್ಟೈಲ್​ ರಿಲೇಯಲ್ಲೂ ರಾಜ್ಯಕ್ಕೆ ಚಿನ್ನ ಒಲಿಯಿತು. ಡೇನಿಯಲ್​ ಪೌಲ್​ ಜೆ, ತನಿಷಿ ಗುಪ್ತಾ, ವಿಶಾಗನ್​ ಶರವಣನ್​, ಧ್ರುಪದ್​ ರಾಮಕೃಷ್ಣ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.