ನ್ಯೂಸ್

17 ನೇ ವಯಸ್ಸಿಗೆ ಕಾಸ್ಟಿಂಗ್‌ ಕೌಚ್‌ಗೆ ಬಲಿಯಾದ ಖ್ಯಾತ ಸಿರೀಯಲ್ ನಟಿ…!

ಟಿವಿ ಇಂಡಸ್ಟ್ರಿಯಲ್ಲಿ ನೆಲೆಯೂರಿರುವ ನಟಿಯರಿಗೂ ಕಾಸ್ಟಿಂಗ್​​ ಕೌಚ್​ ಅನುಭವಗಳು ಆಗುತ್ತಲೇ ಇರುತ್ತೆ. ಆದರೆ ಅಂತಹ ಅನುಭವಗಳನ್ನ ಹೇಳಿಕೊಳ್ಳುವಂತಹ ನಟಿಯರ ಸಂಖ್ಯೆ ಬಹಳಾ ಕಡಿಮೆ.

ಅದರಲ್ಲೂ ಕಾಸ್ಟಂಗ್​​ ಕೌಚ್​​ ವಿಚಾರಗಳನ್ನ ಹಂಚಿಕೊಂಡ ನಟಿಯರ ವೃತ್ತಿ ಜೀವನ ಅರ್ಧಕ್ಕೆ ನಿಂತು ಹೋದ ಸಾಕಷ್ಟು ಉದಾಹರಣೆಗಳಿವೆ.

ಜೂಹಿ ಪರ್ಮಾರ್ ಅವರು ಕುಂಕುಮ್-ಏಕ್ ಪ್ಯಾರಾ ಸಾ ಬಂಧನ್ ಎಂಬ ಟಿವಿ ಶೋನಲ್ಲಿ ಕುಂಕುಮ್ ಪಾತ್ರವನ್ನು ನಿರ್ವಹಿಸಿ ಹೃದಯಗಳನ್ನು ಗೆದ್ದಿದ್ದಾರೆ. ಈ ಕಾರ್ಯಕ್ರಮವು ಸುಮಾರು 7 ವರ್ಷಗಳಿಂದ ಪ್ರಸಾರವಾಗುತ್ತಿದೆ.
ಇತ್ತೀಚೆಗೆ ಈ ಶೋ ನಟಿಯೊಬ್ಬರು ತಾವು 17 ನೇ ವಯಸ್ಸಿನಲ್ಲಿ ಎದುರಿಸಿದ ಕಾಸ್ಟಿಂಗ್ ಕೌಚ್ ಘಟನೆಯನ್ನು ಪ್ರಸ್ತಾಪಿಸಿದ್ದಾರೆ.

ಜೂಹಿ ಪರ್ಮಾರ್ 17 ನೇ ವಯಸ್ಸಿನಲ್ಲಿ ಅನುಭವಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. 17 ನೇ ವಯಸ್ಸಿನವರಿದ್ದಾಗ ವ್ಯಕ್ತಿಯೊಬ್ಬರು ಮ್ಯೂಸಿಕ್‌ ಆಲ್ಬಂನಲ್ಲಿ ನಟಿಸಲು ಅವಕಾಶ ನೀಡಿದ್ದರು. ಆ ಮೇಲೆ ಅವರು ನನಗೆ ಕ್ಯಾಮೆರಾ ಮುಂದೆ ಬರುವಂತಿದ್ದರೆ ಬಿಕಿನಿ ಧರಿಸಬೇಕೆಂದು ಹೇಳಿದ್ದರು.ಆಗ ನನಗೆ ಕೋಪ ಬಂದು ಆ ಆಫರ್‌ ತಿರಸ್ಕರಿಸಿದೆ. ಆಗ ರಾಜಿ ಎಂಬ ಪದವಿತ್ತು. ನೀವು ಉದ್ಯಮದಲ್ಲಿ ರಾಜಿ ಮಾಡಿಕೊಳ್ಳಬೇಕು ಅಂದರೇ ಮಾತ್ರ ಬೆಳೆಯೋಕೆ ಸಾಧ್ಯ ಎಂದು ನನಗೆ ಆ ಚಾನೆಲ್‌ ಮುಖ್ಯಸ್ಥರು ಹೇಳಿದ್ದರು. ಈ ಘಟನೆ ನಡೆದ 2 ವರ್ಷಗಳ ನಂತರ ಡ್ರೈವಿಂಗ್ ಮಾಡುವಾಗ, ತನ್ನ ಕಚೇರಿಯ ಹೊರಗೆ ಚಾನೆಲ್ ಮುಖ್ಯಸ್ಥನನ್ನು ನೋಡಿದೆ ಆಗ ನಾನು ಕಾರ್‌ ನಿಲ್ಲಿಸಿ ಸರ್ ನಾನು ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ ಆದರೂ ಇಂಡಸ್ಟ್ರಿಯಲ್ಲಿ ಚೆನ್ನಾಗಿ ಬದುಕುತ್ತಿದ್ದೇನೆ ಎಂದು ಹೇಳಿದೆ.

ಈ ರೀತಿಯಾಗಿ ನಟಿ ತನಗಾದ ಕಹಿ ಅನುಭವದ ವಿಚಾರವನ್ನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ನಟಿ ತನ್ನ ವೃತ್ತಿಜೀವನದಲ್ಲಿ ಅನೇಕ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. 2023 ರಲ್ಲಿ ಯೇ ಮೇರಿ ಫ್ಯಾಮಿಲಿ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಅವರ ಇತ್ತೀಚಿನ ಸಂದರ್ಶನದಲ್ಲಿ, ಅವರು 17 ನೇ ವಯಸ್ಸಿನಲ್ಲಿ ಅನುಭವಿಸಿದ ಕಹಿ ಘಟನೆಯ ಬಗ್ಗೆ ಮಾತನಾಡಿದ್ದಾರೆ.