ನವದೆಹಲಿ: ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ (ಸೇವಾ ವೇತನ ಮತ್ತು ಷರತ್ತುಗಳು) ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅನುಮೋದಿಸಿದೆ. ಹಿಂದಿದ್ದ ಕಾಯ್ದೆಗಳ ಪ್ರಕಾರ ಎಲ್ಲಾ ನಿವೖತ್ತ ನ್ಯಾಯಾಧೀಶರು ಮತ್ತು ಅವರ ಕುಟುಂಬ ಸದಸ್ಯರು ಪಿಂಚಣಿ ಅಥವಾ ಕುಟುಂಬ ಪಿಂಚಣಿಗೆ ಅರ್ಹರಾಗಿದ್ದರು. ಅವರ ವೇತನ ಪ್ರಮಾಣಕ್ಕೆ ಅನುಗುಣವಾಗಿ ನಿರ್ದಿಷ್ಟ ವಯಸ್ಸನ್ನುತಲುಪಿದಾಗ ಹೆಚ್ಚುವರಿ ಪ್ರಮಾಣದ ಪಿಂಚಣಿ ಅಥವಾ ಕುಟುಂಬ ಪಿಂಚಣಿಗೆ ಅರ್ಹರಾಗುತ್ತಾರೆ. ಲೋಕಸಭೆ ಅನುಮೋದನೆಗೊಳಿಸಿದ ತಿದ್ದುಪಡಿ ಮಸೂದೆಯು - ನ್ಯಾಯಾಧೀಶ ಅಥವಾ ಕುಟುಂಬ ಸದಸ್ಯರು, ಹೆಚ್ಚುವರಿ ಪಿಂಚಣಿಗೆ ಅರ್ಹರಾಗುವ ನಿರ್ದಿಷ್ಟ ಕನಿಷ್ಠ ವಯಸ್ಸನ್ನು ಪೂರ್ಣಗೊಳಿಸಿದ ತಿಂಗಳ ಮೊದಲ ದಿನದಿಂದ ಹೆಚ್ಚುವರಿ ಪಿಂಚಣಿಗೆ ಅರ್ಹರಾಗುತ್ತಾರೆ ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಧೀಶರ ವೇತನ ಮತ್ತು ಪಿಂಚಣಿ ಪಡೆಯುವ ಅರ್ಹತೆಯನ್ನು ಮೊಟಕುಗೊಳಿಸುತ್ತಿಲ್ಲ. ಶಾಸಕಾಂಗದ ಉದ್ದೇಶವನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇವೆ. ಸದನದ ಶಾಸಕಾಂಗ ಶ್ರೇಷ್ಠತೆಯನ್ನು ಯಾರೂ ಪ್ರಶ್ನಿಸಲಾಗುವುದಿಲ್ಲ. ಅಸ್ಸಾಂ ಹೈಕೋರ್ಟ್ ತೀರ್ಪಿನ ಆಧಾರದಲ್ಲಿ ಕ್ರಮ ಕೈಗೊಂಡರೆ, ಅಖಿಲ ಭಾರತ ಸೇವೆಯಲ್ಲಿರುವ ಎಲ್ಲರೂ ಪಿಂಚಣಿ ವಿಷಯದಲ್ಲಿ ಒತ್ತಡ ಹೇರಲಾರಂಭಿಸುತ್ತಾರೆ. ಇದು ಸರ್ಕಾರಕ್ಕೆ ಅತಿದೊಡ್ಡ ಹೊರೆಯಾಗಿಲಿದೆ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಸಿಲಿಂಡರ್ ತೂಕ ಇಳಿಸಲು ಚಿಂತನೆ: ಯುವತಿಯರು ಮತ್ತು ಮಹಿಳೆಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಎಲ್ಪಿಜಿ ಸಿಲಿಂಡರ್ಗಳ ತೂಕ ಕಡಿಮೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸಂಸತ್ತಿಗೆ ತಿಳಿಸಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ, ಹೆಣ್ಣುಮಕ್ಕಳಿಗೆ ಸಿಲಿಂಡರ್ಗಳ ವಿಪರೀತ ಭಾರ ಹೊರಲು ಕಷ್ಟವಾಗುತ್ತಿದೆ. ಹೀಗಾಗಿ ಇದಕ್ಕೊಂದು ಪರಿಹಾರದ ಯೋಚನೆಯಲ್ಲಿದ್ದೇವೆ. ಸಿಲಿಂಡರ್ ತೂಕವನ್ನು 14.2 ಕೆಜಿಯಿಂದ 5 ಕೆಜಿಗೆ ಇಳಿಸುವ ಚಿಂತನೆಯೂ ಇದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಇ-ವಾಹನ ನೋಂದಣಿ, ಕರ್ನಾಟಕ ನಂ 3: ಎಲೆಕ್ಟ್ರಾನಿಕ್ ವಾಹನಗಳ ನೋಂದಣಿಯಲ್ಲಿ ಕರ್ನಾಟಕ ಸೇರಿ ಉತ್ತರ ಪ್ರದೇಶ, ದೆಹಲಿ ರಾಜ್ಯಗಳು ಮೊದಲ ಮೂರು ಸ್ಥಾನಗಳಲ್ಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಂಸತ್ತಿಗೆ ತಿಳಿಸಿದ್ದಾರೆ. ಸದ್ಯ ದೇಶದಲ್ಲಿ 8,70,141 ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಲಾಗಿದೆ. ಉತ್ತರ ಪ್ರದೇಶದಲ್ಲಿ 2,55,700, ದೆಹಲಿಯಲ್ಲಿ 1,25,347 ಮತ್ತು ಕರ್ನಾಟಕದಲ್ಲಿ 72,544 ವಾಹನಗಳನ್ನು ರಿಜಿಸ್ಟರ್ ಮಾಡಲಾಗಿದೆ. ಬಿಹಾರ, ಮಹಾರಾಷ್ಟ್ರ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ
ಸಂಸತ್ಗೆ ಸರ್ಕಾರದ ಮಾಹಿತಿ:
ನಾಗಾಲ್ಯಾಂಡ್ ಘಟನೆ ಚರ್ಚೆಯಾಗಲಿ: ನಾಗಾಲ್ಯಾಂಡ್ನಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಅಮಾಯಕ ನಾಗರಿಕರನ್ನು ಹತ್ಯೆಗೈದ ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ರ್ಚಚಿಸಬೇಕು ಎಂದು ನಾಗಾ ಪೀಪಲ್ಸ್ ಫ್ರಂಟ್ ನಾಯಕ, ರಾಜ್ಯಸಭೆ ಸಂಸದ ಕೆ.ಜಿ. ಕೆನ್ಯೆ ಒತ್ತಾಯಿಸಿದ್ದಾರೆ. ಪ್ರತಿಪಕ್ಷಗಳ ನಾಯಕರು ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ಬಗ್ಗೆ ರ್ಚಚಿಸಲು ನೋಟಿಸ್ ಮಂಡಿಸಿದ್ದಾರೆ.
ಅನುಮೋದನೆಗೊಂಡ ಮಸೂದೆಗಳು: