ಉತ್ತಮ ಪ್ರದರ್ಶನ ನೀಡಿದ ಸರಸ್ವತಿಪುರಂನ ಜೆಎಸ್‌ಎಸ್ ಪದವಿಪೂರ್ವ ಕಾಲೇಜು ತಂಡ ನಗರ ಅಂತರ ಕಾಲೇಜು ಮಹಿಳಾ ಥ್ರೋಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ನಗರದ ಜಿಎಸ್‌ಎಸ್ ಸಿಂಹ ಸುಬ್ಬಲಕ್ಷ್ಮೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಫೈನಲ್ ಪಂದ್ಯದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜು ವಿರುದ್ಧ 18-25, 25-21, 25-21 ರಿಂದ ಜಯ ಸಾಧಿಸಿತು. ಜಿಎಸ್‌ಎಸ್‌ಎಸ್ ಮಹಿಳಾ ಇಂಜಿನಿಯರಿಂಗ್ ಕಾಲೇಜು ತಂಡದವರು ತೃತೀಯ ಸ್ಥಾನ ಪಡೆದರು.
ಖೋ-ಖೋ ಪಂದ್ಯಾವಳಿಯಲ್ಲಿ ವಿವೇಕಾನಂದ ಪಿಯು ಕಾಲೇಜು ತಂಡ ಪ್ರಥಮ ಸ್ಥಾನ ಪಡೆಯಿತು. ಅಂತಿಮ ಪಂದ್ಯದಲ್ಲಿ ಜಿಎಸ್‌ಎಸ್‌ಎಸ್ ಮಹಿಳಾ ಇಂಜಿನಿಯರಿಂಗ್ ತಂಡವನ್ನು 14-3 ಅಂಕಗಳಿಂದ ಮಣಿಸಿತು.
ವಿವೇಕಾನಂದ ಕಾಲೇಜಿನ ರಾಧಿಕಾ,ಅಂಬಿಕಾ ಉತ್ತಮ ಚೇಸರ್ ಹಾಗೂ ಡಿಫೆಂಡರ್ ಆಗಿ ಕಾಡಿದರು. ಜಿಎಸ್‌ಎಸ್‌ಎಸ್ ಕಾಲೇಜಿನ ಅಮೃತಾ ಉತ್ತಮ ಆಟವಾಡಿದರು. ಪಿಜಿಎಸ್‌ಸಿ ಮಾನಸಗಂಗೋತ್ರಿ ತಂಡವು ಮೂರನೇ ಸ್ಥಾನಪಡೆಯಿತು.