ಬೆಂಗಳೂರಿನ ಜಯನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಸಿರು ದಿನ ಆಚರಿಸಲಾಯಿತು. ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಿ.ಎಂ. ಶಶಿಕಲಾ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.  
ನ್ಯೂಸ್

ಜೆಎಸ್‌ಎಸ್‌ ಸಂಸ್ಥೆಯಿಂದ ಹಸಿರು ದಿನ; ವೃತ್ತಿ ತರಬೇತಿ ಕೇಂದ್ರದಲ್ಲಿ ಸಸಿ ವಿತರಣೆ ಹಾಗೂ ನೆಡುವ ಕಾರ್ಯಕ್ರಮ

Webdesk - Athul Damale

ಬೆಂಗಳೂರು: ಜೆಎಸ್‌ಎಸ್ ಜನ ಶಿಕ್ಷಣ ಸಂಸ್ಥೆಯಿಂದ ನಗರದ ವಿವಿಧೆಡೆ ಗಿಡ ನೆಡುವ ಹಾಗೂ ವಿತರಿಸುವ ಮೂಲಕ ಹಸಿರು ದಿನವನ್ನು ಆಚರಿಸಲಾಯಿತು. ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಜನ ಶಿಕ್ಷಣ ಸಂಸ್ಥೆಯು ಅನೇಕ ವೃತ್ತಿ ತರಬೇತಿಗಳನ್ನು ನೀಡುತ್ತಿದೆ.

ಜಯನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್.ಸಿ. ಕುಮಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಂಗೇರಿ, ಸರ್ಜಾಪುರ, ಬಳಗಾರನಹಳ್ಳಿ, ಎಚ್. ಹೊಸಹಳ್ಳಿ, ಕಮ್ಮಸಂದ್ರ, ಶೀಗೇಹಳ್ಳಿ, ವಿವೇಕಾನಂದನಗರ, ಹುಸ್ಕೂರು ಹಾಗೂ ಚಿಕ್ಕಬಾಣಾವರ ತರಬೇತಿ ಕೇಂದ್ರ ಸೇರಿ 18 ಕಡೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸ್ಥೆಯ ನಿರ್ದೇಶಕಿ ಡಿ.ಎಂ. ಶಶಿಕಲಾ, ಸಿಬ್ಬಂದಿ ಹಾಗೂ ಕಲಿಕಾರ್ಥಿಗಳು ಸೇರಿ 350ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.