ನ್ಯೂಸ್

'ಜಾನಕಿ'ಯೇ ವಿವಾದಕ್ಕೆ ಕಾರಣ! ಚಿತ್ರ ವೀಕ್ಷಿಸಿದ ಬಳಿಕವೇ ಆದೇಶ ಎಂದ ಕೇರಳ ಹೈಕೋರ್ಟ್​ | JSK Film

JSK Film: ತೆಲುಗು ನಟಿ ಅನುಪಮಾ ಪರಮೇಶ್ವರನ್​ ನಟಿಸಿರುವ ಬಹುನಿರೀಕ್ಷಿತ ‘ಜಾನಕಿ ವರ್ಸಸ್​ ಸ್ಟೇಟ್​ ಆಫ್​ ಕೇರಳ’ ಚಿತ್ರ ಸದ್ಯ ವಿವಾದದಿಂದಲೇ ಮುಳುಗಿ ಹೋಗಿದೆ. ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದೇ ಆದರೂ ಬಿಡುಗಡೆಗೆ ಬೇಕಾದ ಅನುಮತಿಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಸಂಪೂರ್ಣವಾಗಿ ನಿರಾಕರಿಸಿದೆ. ಸದ್ಯ ಇದೇ ಚಿತ್ರತಂಡದ ಆಕ್ರೋಶ, ಕಾನೂನು ಸಮರಕ್ಕೆ ಕಾರಣವಾಗಿದೆ.

ಚಿತ್ರದ ಶೀರ್ಷಿಕೆಯಲ್ಲಿರುವ ‘ಜಾನಕಿ’ ಹೆಸರೇ ಸಿಬಿಎಫ್​ಸಿ ನಿರಾಕರಣೆಗೆ ದೊಡ್ಡ ಕಾರಣವಾಗಿದೆ. ಇದು ಮಾಲಿವುಡ್​ ಚಿತ್ರರಂಗಕ್ಕೆ ಹೊಸ ತಲೆಬಿಸಿಯನ್ನು ತಂದೊಡ್ಡಿದೆ. ಈ ವಿಚಾರ ಸದ್ಯ ಕೇರಳ ಹೈಕೋರ್ಟ್​ ಮೆಟ್ಟಿಲೇರಿದ್ದು, ಚಿತ್ರದ ನಿರ್ಮಾಪಕರು, ನಿರ್ದೇಶಕರು ಶೀರ್ಷಿಕೆ ಬದಲಾಯಿಸಿಕೊಳ್ಳಿ ಎಂದು ತಗಾದೆ ತೆಗೆದಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್​ಸಿ) ವಿರುದ್ಧ ತೀವ್ರ ಅಸಮಾಧಾನ, ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಕಾರಣಕ್ಕೂ ಈಗ ಜಾನಕಿ ಹೆಸರು ಬದಲಿಸುವ ಮಾತಿಲ್ಲ ಎಂದಿದೆ.

ಚಿತ್ರ ವೀಕ್ಷಣೆ ಬಳಿಕ ಆದೇಶ

ಇನ್ನೂ ಸಿಬಿಎಫ್​ಸಿ ಕೂಡ ಇದೇ ಮಾತನ್ನು ಹೇಳಿದ್ದು, ಜಾನಕಿ ಬಿಟ್ಟು ಇನ್ಯಾವ ಹೆಸರನ್ನು ಬೇಕಾದರೂ ಬಳಿಸಿಕೊಳ್ಳಿ. ಅದಕ್ಕೆ ನಮ್ಮದೇನು ಸಮಸ್ಯೆಯಿಲ್ಲ ಎಂದು ಹೇಳಿದೆ. ಆದರೆ, ಇಬ್ಬರಲ್ಲಿ (ಚಿತ್ರತಂಡ ಮತ್ತು ಸಿಬಿಎಫ್​ಸಿ) ನಡುವೆ ಯಾರೊಬ್ಬರೂ ಸೋಲದ ಹಿನ್ನಲೆ ಈ ವಿಚಾರ ಇದೀಗ ಕೇರಳ ಹೈಕೋರ್ಟ್​ ಮೆಟ್ಟಿಲೇರಿದೆ. ಮೊದಲ ವಿಚಾರಣೆಯಲ್ಲಿ ಸಿಬಿಎಫ್​ಸಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಕೋರ್ಟ್, ಚಿತ್ರದಲ್ಲಿ ಅಂತಹ ಸಮಸ್ಯೆ ಏನಿದೆ ಎಂಬುದನ್ನು ಪರಿಶೀಲಿಸಲು ಮುಂದಾಗಿದೆ. ಈ ಹಿನ್ನಲೆ ಆದೇಶ ಕೊಡುವ ಮುನ್ನ ಜುಲೈ 05ರಂದು ಸಿನಿಮಾವನ್ನು ವೀಕ್ಷಿಸುವುದಾಗಿ ನ್ಯಾಯಾಲಯ ತಿಳಿಸಿದೆ.

‘ಜಾನಕಿ‘ಯೇ ವಿವಾದ

ಕೇರಳದ ಚಲನಚಿತ್ರ ನಿರ್ಮಾಪಕರ ಒಕ್ಕೂಟವಾದ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (FEFKA), ಸೋಮವಾರ (ಜೂ.30) ತಿರುವನಂತಪುರಂನಲ್ಲಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇದಕ್ಕೆ ಕಾರಣ ಜೆಸ್​ಕೆ: ಜಾನಕಿ ವರ್ಸಸ್​ ಸ್ಟೇಟ್ ಆಫ್ ಕೇರಳ ಚಿತ್ರದ ಶೀರ್ಷಿಕೆಯಲ್ಲಿರುವ ಜಾನಕಿ ಹೆಸರು. ಚಿತ್ರದಲ್ಲಿ ಹಿಂದೂ ದೇವತೆ ಸೀತೆಯನ್ನು ಉಲ್ಲೇಖಿಸುವ ಪಾತ್ರ ಜಾನಕಿಯ ಹೆಸರನ್ನು ಬದಲಾಯಿಸಬೇಕೆಂದು ಸಿಬಿಎಫ್‌ಸಿ ಒತ್ತಾಯಿಸಿದೆ. ಆದ್ರೆ, ಇದಕ್ಕೆ ಚಿತ್ರತಂಡ ಸುತಾರಾಮ್ ಒಪ್ಪಿಗೆ ನೀಡಿಲ್ಲ,(ಏಜೆನ್ಸೀಸ್).