Jr NTR suffers shoulder injury, advised complete rest for 6-8 weeks
- ಡ್ರ್ಯಾಗನ್ ಸಿನಿಮಾ ಶೂಟಿಂಗ್ ವೇಳೆ ಜೂನಿಯರ್ ಎನ್ಟಿಆರ್ಗೆ ಗಾಯ.
- 6-8ವಾರ ಕಂಪ್ಲೀಟ್ ರೆಸ್ಟ್ನಲ್ಲಿರುವತೆ ವೈದ್ಯರಿಂದ ಸಲಹೆ, ಬರಪೂರ ಹಾರೈಕೆ ಕಾಮೆಂಟ್.
- ಬೇಗ ಗುಣಮುಖರಾಗುವಂತೆ ಅಭಿಮಾನಿಗಳು, ಸಿನಿಮಾ ರಂಗದವರು ಟ್ವೀಟ್ ಮಾಡಿ ಹಾರೈಸುತ್ತಿದ್ದಾರೆ.
Jr NTR suffers shoulder injury advised complete rest for 6-8 weeks: ಡ್ರಾಗನ್ ಸಿನಿಮಾದ ಸಾಹಸ ದೃಶ್ಯ ಶೂಟಿಂಗ್ ಮಾಡುವ ವೇಳೆ ಜೂನಿಯರ್ ಎನ್ಟಿಆರ್ ಭುಜಕ್ಕೆ ಗಾಯವಾಗಿದ್ದು, ಆರರಿಂದ ಎಂಟು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ವೈದ್ಯರಿಂದ ಮೇಲ್ವಿಚಾರಣೆ
ಜೂನಿಯರ್ ಎನ್ಟಿಆರ್ ಅವರ ಅಧಿಕೃತ ತಂಡದ ಪ್ರಕಾರ, ಎನ್ಟಿಆರ್ ಅವರ ಭುಜಕ್ಕೆ ಗಾಯವಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅವರಿಗೆ ಆರರಿಂದ ಎಂಟು ವಾರ ಸಮಯ ಬೇಕಾಗಬಹುದು. ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಭಯಭೀತರಾಗುವ ಅವಶ್ಯಕತೆ ಇಲ್ಲ. ಎಂದು ತಂಡ ಪ್ರಕಟಣೆಯಲ್ಲಿ ಹಂಚಿಕೊಂಡಿದೆ.
ಡಾ. ಜೆ. ಮಧುಸೂದನ್ ರಾವ್ ಮತ್ತು ಡಾ. ಆರ್.ಎ. ಪುರಚಂದ್ರ ತೇಜಸ್ವಿ ನೇತೃತ್ವದ ವೈದ್ಯರ ತಂಡ ಅವರ ಮೇಲ್ವಿಚಾರಣೆಯನ್ನು ನಡೆಸುತ್ತಿದೆ. ಅವರ ಆರೋಗ್ಯ ಹಾಗೂ ಚೇತರಿಸಿಕೊಳ್ಳುವ ಬಗ್ಗೆ ಮಾಹಿತಿಯನ್ನು ನೀಡುತ್ತಲೇ ಇರುತ್ತೇವೆ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಡ್ರ್ಯಾಗನ್ ಸಿನಿಮಾ ಬಗ್ಗೆ
ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಪೀರಿಯಡ್ ಆಕ್ಷನ್ ಡ್ರಾಮಾ ಡ್ರ್ಯಾಗನ್ ಸಿನಿಮಾ2027 ಜೂನ್ 11ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಅನಿಲ್ ಕಪೂರ್, ಬಿಜು ಮೆನನ್, ಗುರು ಸೋಮಸುಂದರಂ, ಅಶುತೋಷ್ ರಾಣಾ, ಖುಷ್ಬು ಸುಂದರ್, ರಾಜೀವ್ ಕನಕಲಾ, ಅಂಶುಮಾನ್ ಪುಷ್ಕರ್, ಸಿದ್ಧಾಂತ್ ಗುಪ್ತಾ, ಪ್ರಭಾಸ್ ಶ್ರೀನು, ಶತ್ರು, ಶಿವ, ಭೀಮಲ್ ಜೀತ್ ಒಬೆರಾಯ್, ನ್ಟುತುಜೆಲೊ ಪ್ರಿನ್ಸ್ ಗ್ರೂಟ್‌ಬೂಮ್, ಅಲೆಕ್ಸಾಂಡರ್ ಮಿಜೆವ್ ಮತ್ತು ಬೆನೆಡಿಕ್ಟ್ ಪಾಲ್ ಗ್ಯಾರೆಟ್ ಸೇರಿದಂತೆ ಘಟಾನುಘಟಿ ನಾಯಕರು ಇಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನಮೆ, ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್ಟಿಆರ್ ಆರ್ಟ್ಸ್ ನಿರ್ಮಾಣದಲ್ಲಿ ಬರುತ್ತಿರುವ ಸಿನಿಮಾ ತೆಲುಗು, ಕನ್ನಡ ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ.
ಡ್ರ್ಯಾಗನ್ ಸಿನಿಮಾ ಕತೆ ಏನು?
ಡ್ರ್ಯಾಗನ್ 1967 ರಲ್ಲಿ ನಡೆಯುತ್ತಿದ್ದು, ಅಫೀಮು ವ್ಯಾಪಾರದ ಸುತ್ತ ಸುತ್ತುತ್ತದೆ, ಅಫ್ಘಾನ್ ಟ್ರೇಡಿಂಗ್ ಕಂಪನಿಯ ಸುತ್ತ ಕತೆ ಸುತ್ತುತ್ತದೆ. ಎನ್ಟಿಆರ್ ಅಫ್ಘಾನ್ ಟ್ರೇಡಿಂಗ್ ಕಂಪನಿಯ ಕೊಲೆಗಾರ ಲುಗರ್ ಪಾತ್ರವನ್ನು ನಿರ್ವಹಿಸುತ್ತಾರೆ.
ಅಭಿಮಾನಿಗಳಿಂದ ಹಾರೈಸಿ ಟ್ವೀಟ್
ಜೂನಿಯರ್ ಎನ್ಟಿಆರ್ ಅವರ ಆರೋಗ್ಯಕ್ಕುಂಟಾಗಿರುವ ಸಮಸ್ಯೆ ಬಗ್ಗೆ ಮಾಹಿತಿ ಹೊರಬರುತ್ತಲೇ ಹಲವರು ಅವರಿಗೆ ಹಾರೈಸಿ ಕಾಮೆಂಟ್ ಮಾಡುತ್ತಿದ್ದಾರೆ. ಆದಷ್ಟು ಬೇಗನೆ ಗುಣಪಡಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಹಾರೈಕೆ ಮಾಡುತ್ತಿದ್ದಾರೆ.
ಸಿನಿ ತಾರೆಯರಿಂದ ಹಾರೈಕೆ
ಗುಂಟೂರು, ಬುಟ್ಟ ಬೊಮ್ಮ, ಸಮಜವರಗಮದಂತಹ ಹಿಟ್ ಹಾಡುಗಳನ್ನು ಕೊಟ್ಟ ಪ್ಲೇಬ್ಯಾಕ್ ಸಿಂಗರ್ ಹಾಗೂ ಸಂಗೀತ ಸಂಯೋಜಕ ಥಮನ್ ಎಸ್ ಟ್ವೀಟ್ ಮಾಡಿ ತಾರಕ್ ಅಣ್ಣ ಎಲ್ಲರ ಪ್ರೀತಿಗೆ ಅರ್ಹರು. ಅವರು ಬೇಗನೆ ಗುಣವಾಗುವಂತೆ ಎಲ್ಲರೂ ಹಾರೈಸಿ, ಶ್ರದ್ಧೆಯಿಂದ ಪ್ರಾರ್ಥಿಸಬೇಕು ಎಂದು ಜೂನಿಯರ್ ಎನ್ಟಿಆರ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ನಿರ್ದೇಶಕ ಗೋಪಿಚಂದ್ ಮೇಲಿನೆನಿ ಸಹ ಟ್ವೀಟ್ ಮಾಡಿ ಬೇಗನೆ ಚೇತರಿಸಿಕೊಳ್ಳಿ ಎಂದು ಹೇಳಿದ್ದಾರೆ.ಇದೇ ವೇಳೆ ಟಾಲಿವುಡ್ ನಟ ರಾಮ್ಚರಣ್ ಅವರು ಗಾಯಗೊಂಡಿದ್ದು, ಅವರು ಸಹ ಬೇಗ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ, (ಏಜೆನ್ಸಿಸ್).