war-2 ; 2025ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ವಾರ್ 2' ಚಿತ್ರದ ಟ್ರೈಲರ್ ಇಂದು (ಜು.25) ರಿಲೀಸ್ ಆಗಿದೆ.
ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ ಮತ್ತು ಸೂಪರ್ ಸ್ಟಾರ್ ನಾಯಕ ಜೂನಿಯರ್ ಎನ್.ಟಿ.ಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ.
(ಏಜೆನ್ಸೀಸ್)
2 ನಿಮಿಷ 35 ಸೆಕೆಂಡುಗಳ ಈ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸಂಚಲನ ಮೂಡಿಸಿದೆ. ಟ್ರೈಲರ್ನಲ್ಲಿ ಹೃತಿಕ್ ರೋಷನ್ ಮತ್ತು ಜೂ ಎನ್‌ಟಿಆರ್ ಇಬ್ಬರ ಎಂಟ್ರಿ ಹಾಗೂ ಕೆಲವು ಆಕ್ಷನ್ ದೃಶ್ಯಗಳನ್ನು ತೋರಿಸಲಾಗಿದ್ದು, ಆಕ್ಷನ್ ದೃಶ್ಯಗಳಂತೂ ಸಾಕಷ್ಟು ಗಮನ ಸೆಳೆಯುವಂತಿದೆ. ಅದ್ದೂರಿ ಸಾಹಸ ದೃಶ್ಯಗಳಲ್ಲಿ ಹೃತಿಕ್, ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ಇಬ್ಬರೊಂದಿಗೂ ಮುಖಾಮುಖಿಯಾಗಿ ಹೋರಾಡುವುದರ ಜೊತೆಗೆ, ದೇಶಭಕ್ತಿ ಕೂಡ ಕಾಣಬಹುದು. ಈ ದೃಶ್ಯ ನೋಡುಗರಿಗೆ ರೋಮಾಂಚನಕಾರಿ ಎಂದೆನಿಸುತ್ತದೆ. ಈ ಟ್ರೈಲರ್ ಹೃತಿಕ್ ರೋಷನ್ ಅವರೊಂದಿಗಿನ ಅವರ ಹೋರಾಟದ ದೃಶ್ಯಗಳ ಒಂದು ನೋಟವನ್ನು ತೋರಿಸಲಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಭರವಸೆ ಮೂಡಿಸಿದೆ.
ಆಕ್ಷನ್, ಕ್ರೈಮ್, ಥ್ರಿಲ್ಲರ್ ಚಿತ್ರವಾದ 'ವಾರ್ 2' 2019 ರ 'ವಾರ್' ಚಿತ್ರದ ಎರಡನೇ ಭಾಗವಾಗಿದ್ದು, ಭಾರತದ ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನ ಮೊದಲು ಅಂದರೆ ಮುಂದಿನ (ಆ.14) ರಂದು ಬೆಳ್ಳಿತೆರೆಗೆ ಬರಲಿದೆ.