ನ್ಯೂಸ್

ಅಡಿಕೆ ಬೆಳೆಗಾರರಿಗೆ ಅನುಕೂಲ ಮಾಡಿದ್ದೇ ಬಿಜೆಪಿ; ನಮ್ಮ ದೇಶದಲ್ಲಿ ಕಳ್ಳ‌ ಅಡಿಕೆ ಮಾರಾಟಕ್ಕೆ ಅವಕಾಶವಿಲ್ಲ!

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಡಿಕೆ ಬೆಳಗಾರರ ಪರ 1983ರಲ್ಲಿ 62 ಕಿ.ಮೀ ಪಾದಯಾತ್ರೆ ಮಾಡಿದರು. ಇಂದು ಅಡಿಕೆ ಬೆಳಗಾಗರರಿಗೆ ಅನುಕೂಲಕರ ವಾತಾವರಣ ಇದೆ ಎಂದಾದರೆ ಅದಕ್ಕೆ ಕಾರಣ ಬಿಜೆಪಿ ಎಂದು ಕೊಪ್ಪದಲ್ಲಿ ನಡೆದ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಸಮಾವೇಶದ ಮಾತನಾಡುತ್ತಾ, ನಿಜವಾದ ರೈತ ನಾಯಕ ಪ್ರಧಾನಿ ನರೇಂದ್ರ ಮೋದಿ. 2014ರಲ್ಲಿ ಕೇವಲ 2 ಮೆಗಾ ಪಾರ್ಕ್‌ ಇತ್ತು. ಇಂದು ದೇಶದಲ್ಲಿ 22 ಮೆಗಾ ಪಾರ್ಕ್​ಗಳಿವೆ. ಕರ್ನಾಟಕದಲ್ಲಿ 2017ರಲ್ಲಿ 2 ಲಕ್ಷದ 79 ಸಾವಿರ ಎಕರೆ ಅಡಿಕೆ ಬೆಳೆಯುವ ಪ್ರದೇಶ ಇತ್ತು. ಆದರೆ ಇಂದು 5 ಲಕ್ಷ 41 ಸಾವಿರ ಎಕರೆಯಲ್ಲಿ ಕೃಷಿಕರು ಅಡಿಕೆ ಬೆಳೆಯುತ್ತಿದ್ದಾರೆ. ಶೇ. 78 ರಷ್ಟು ಅಡಿಕೆ ಬೆಳೆಗಾರರ ಸಂಖ್ಯೆ ಹೆಚ್ಚಾಗಿದೆ ಎಂದರು.

ನಾವು ಏನೇ ಮಾತನಾಡಿದರು ಅಂಕಿ ಅಂಶಗಳ ಆಧಾರದ ಮೇಲೆ ಮಾತನಾಡುತ್ತೇವೆ. ನಮ್ಮ ದೇಶದಲ್ಲಿ ಕಳ್ಳ‌ಅಡಿಕೆ ಮಾರಾಟಕ್ಕೆ ಅವಕಾಶವಿಲ್ಲ. ಆಮದು ಸುಂಕ 3 ಶೇ. ಹೆಚ್ಚು ಮಾಡಿದ್ದೇವೆ. ಎಲೆ ಚುಕ್ಕಿ, ಹಳದಿ ರೋಗಕ್ಕೆ ಪ್ರಯೋಗಾಲಯ ತೆರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಬಜೆಟ್​​ನಲ್ಲಿ 25 ಕೋಟಿ ರೂ. ಮೀಸಲಿಟ್ಟು ಸಂಶೋಧನೆ ಆರಂಭಿಸದ್ದೇವೆ. ತೀರ್ಥಹಳ್ಳಿ-ಶೃಂಗೇರಿಗೆ 10 ಕೋಟಿ ರೂ. ನೀಡಿ ರೋಗದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ಎಲ್ಲಾ‌ ಸಮಯದಲ್ಲೂ ಅಡಿಕೆ ಹಾಗೂ ನಿಮ್ಮ ರಕ್ಷಣೆಗೆ ಸದಾ ನಿಮ್ಮ ಜೊತೆ ಇರುತ್ತವೆ ಎಂದು ಜೆಪಿ ನಡ್ಡಾ ಹೇಳಿದರು.