ಪಟನಾ: ಬಿಹಾರದಲ್ಲಿ ಕರೊನಾ ವೈರಸ್ ವಿಪರೀತ ಹೆಚ್ಚಾಗುತ್ತಿದೆ. ಬಿಜೆಪಿ ನಾಯಕರಿಗಂತೂ ಎಡಬಿಡದೆ ಕಾಡುತ್ತಿದೆ. ಈಗಾಗಲೇ 75ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ.
ಇದೀಗ ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾನ್ ಅವರಲ್ಲೂ ಕರೊನಾ ವೈರಸ್ ದೃಢಪಟ್ಟಿದೆ. ಕೇವಲ ಸಂಜಯ್ ಅವರಿಗೆ ಮಾತ್ರವಲ್ಲದೆ, ಅವರ ತಾಯಿ, ಪತ್ನಿಗೂ ಸೋಂಕು ತಗುಲಿದೆ. ಈ ಬಗ್ಗೆ ಸಂಜಯ್ ಜೈಸ್ವಾನ್ ಸಹೋದರ ದೀಪಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸಂಜಯ್ ಅವರಲ್ಲಿ ಕೆಮ್ಮು ಮತ್ತು ಸಣ್ಣ ಪ್ರಮಾಣದಲ್ಲಿ ಕೆಮ್ಮು ಕಾಣಿಸಿಕೊಂಡಿದೆ. ಅವರು ಇತ್ತೀಚೆಗಷ್ಟೇ ಪಟನಾದಲ್ಲಿ ನಡೆದ ಪಕ್ಷದ ಪ್ರಾದೇಶಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಲು ಪ್ರಾರಂಭವಾಗಿತ್ತು. ಅನುಮಾನಗೊಂಡು ಕೊವಿಡ್-19 ಟೆಸ್ಟ್ ಮಾಡಿಸಿದಾಗ, ಸೋಂಕು ಇರುವುದು ದೃಢಪಟ್ಟಿದೆ ಎಂದು ದೀಪಕ್ ಅವರು ತಿಳಿಸಿದ್ದಾರೆ. ನಂತರ ಅವರ ಪತ್ನಿ ಮತ್ತು ತಾಯಿಯನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು. ಇದನ್ನೂ ಓದಿ: ಸಿಬಿಎಸ್ಇ ಫಲಿತಾಂಶ: ಅಭಿನಂದನೆ ಸಲ್ಲಿಸಿ…ಆತ್ಮವಿಶ್ವಾಸವನ್ನೂ ತುಂಬಿದ ಪ್ರಧಾನಿ ಮೋದಿ
ಬಿಹಾರದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜು.16ರಿಂದ 31ರವರೆಗೆ ಮತ್ತೊಮ್ಮೆ ಲಾಕ್ಡೌನ್ ಹೇರಿಕೆಯಾಗಲಿದೆ. ಅಕ್ಟೋಬರ್ನಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಮುಖಂಡರು ಅದರ ತಯಾರಿಯನ್ನೂ ನಡೆಸಿದ್ದಾರೆ. ಸಭೆ, ವರ್ಚ್ಯುವಲ್ ರ್ಯಾಲಿಗಳೂ ನಡೆಯುತ್ತಿವೆ. (ಏಜೆನ್ಸೀಸ್)