ಕೋಲಾರ: ಮಾಧ್ಯಮಗಳು ಸಮರ್ಪಕ ವಾಹಿತಿ ನೀಡುವಲ್ಲಿ ವಿಫಲವಾಗಿದ್ದು, ವಿಡಂಬನೆ, ಟೀಕೆ ಟಿಪ್ಪಣಿಗಳು ಆರೋಗ್ಯಕರವಾಗಿರಬೇಕು. ಮಾಹಿತಿಯಲ್ಲಿ ಸತ್ಯಾಂಶವಿರಬೇಕು ಮತ್ತು ಲೇಖನಗಳು ಮಾನಹಾನಿಯಾಗಿರಬಾರದು ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನವಾನಳ್ಳಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಜಿಲ್ಲಾ ಸಂಘ, ಬೆಂ.ಉ.ವಿವಿ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ವಾತನಾಡಿದರು.
ರಾಜ್ಯದಲ್ಲಿ 1843ರ ಜುಲೈ 1ರಂದು ಮಂಗಳೂರು ಸವಾಚಾರ್ ಕನ್ನಡ ಪತ್ರಿಕೆ ಪ್ರಾರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರವನ್ನು ಹುಟ್ಟು ಹಾಕಿದ್ದು, ಆಗ ಕಲ್ಲಚ್ಚಿನ ಮುದ್ರಣವಿತ್ತು. ನಂತರ ಅಚ್ಚುಮೊಳೆಗಳನ್ನು ಜೋಡಿಸಿ ಪತ್ರಿಕೆ ಮುದ್ರಣ ವಾಡಲಾಗುತ್ತಿತ್ತು. ಆದರೀಗ ಕಂಪ್ಯೂಟರ್, ಅತ್ಯಾಧುನಿಕ ಮುದ್ರಣ ಯಂತ್ರಗಳ ಬಳಕೆಯಾಗುತ್ತಿದೆ ಎಂದರು.
ಆಂಗ್ಲರ ಆಳ್ವಿಕೆಯಲ್ಲಿ ಶಿಕ್ಷಣ, ಕೈಗಾರಿಕೆ, ವ್ಯಾಪಾರ ಮುನ್ನಡೆ ಸಾಧಿಸಿದ್ದರೂ, ಪತ್ರಿಕೋದ್ಯಮವು ಅಭಿವೃದ್ಧಿ ಕಂಡಿರಲಿಲ್ಲ. ಹರ್ಮನ್ ಕನ್ನಡ ಕಲಿತು 50 ವರ್ಷದ ನಂತರ ಪತ್ರಿಕೆ ಪ್ರಾರಂಭಿಸಿದ್ದು, ನಂತರ ಪತ್ರಿಕೋದ್ಯಮ ಕಣ್ಣುಬಿಡಲು ಪ್ರಾರಂಭಿಸಿತು ಎಂದರು.
ಪತ್ರಕರ್ತರ ಸಂದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ವಾತನಾಡಿ, 2008ರಿಂದ ಪತ್ರಿಕಾ ದಿನಾಚರಣೆಯನ್ನು ಜಿಲ್ಲಾ ಕೇಂದ್ರದಲ್ಲಿ ಹಬ್ಬದ ವಾತಾವರಣದಂತೆ ಆಚರಿಸಲಾಗುತ್ತಿದೆ. ಪತ್ರಕರ್ತರ ಬದುಕು ಮನೆಗೆ ವಾರಿ ಊರಿಗೆ ಉಪಕಾರಿ ಎಂಬಂತಾಗಿದೆ. ತಮ್ಮ ಕುಟುಂಬದ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಂಡು ಸವಾಜದ ಕಳಕಳಿಯಲ್ಲಿ ಮುಳುಗಿ ಹೋಗಿರುವಂತಹ ಬದುಕಾಗಿದೆ ಎಂದರು.
ಪತ್ರಕರ್ತರ ಸಂದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ವಾತನಾಡಿ, ಪತ್ರಿಕಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಗಾಂಧಿಜೀ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಾಹಿತಿ ಮತ್ತು ಪತ್ರಿಕಾ ಪಿತಾಮಹ ಡಿ.ವಿ.ಜಿ.ಅವರ ಅನಿಸಿಕೆ, ಅಭಿಪ್ರಾಯಗಳನ್ನು ನೆನಪಿಸಿ, ಕೋಲಾರ ಜಿಲ್ಲಾ ಪತ್ರಕರ್ತರ ಸಂದ ಇತಿಹಾಸ ಸ್ಮರಿಸಿದರು.
ಪತ್ರಕರ್ತರಿಗೆ ಪ್ರಶಸ್ತಿ, ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಸಾಧನೆಗೈದ ಪತ್ರಕರ್ತರ 46 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮೂಲಕ ಒಟ್ಟೂ 1.46 ಲಕ್ಷ ರೂ.ಗಳನ್ನು ಪ್ರೋತ್ಸಾಹಧನವಾಗಿ ವಿತರಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು, ಬೆಂ.ಉ.ವಿವಿ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಡಾ.ಆರ್.ಮಂಜುನಾಥ್, ಉಪನ್ಯಾಸಕ ಡಾ. ಮಂಜುನಾಥ್, ಸಂದ ಖಜಾಂಜಿ ಎ.ಜಿ. ಸುರೇಶ್‌ಕುವಾರ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್, ನಾಮನಿರ್ದೇಶನ ಸದಸ್ಯ ವಾಸುದೇವ ಹೊಳ್ಳ ಉಪಸ್ಥಿತರಿದ್ದರು.
ಅನವಶ್ಯಕ ವಿಷಯ ವೈಭವೀಕರಣ: ಸರ್ಕಾರವು ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ ಎಂದು ಹೇಳುತ್ತಿದ್ದರೂ, ದಂಡ ಪ್ರಯೋಗ ತಪ್ಪುತ್ತಿಲ್ಲ. ಕೆಲವು ವಾಧ್ಯಮಗಳು ಸಮಾಜದಲ್ಲಿ ಕಾವಲು ನಾಯಿಗಳಾಗುವ ಬದಲು ಮುದ್ದಿನ ನಾಯಿಗಳಾಗುತ್ತಿವೆ. ಬಂಡವಾಳಶಾಹಿಗಳ ಹಿತಕಾಯುವ ಮೂಲಕ ಕಾರ್ಪೊರೇಟ್ ಕಂಪನಿಗಳ ಬಾಲಂಗೋಚಿಗಳಾಗುತ್ತಿವೆ. ಮಾಧ್ಯಮಗಳು ಜನಪರ ಕಾಳಜಿ ತೋರದೆ ಅನವಶ್ಯಕ ವಿಷಯಗಳನ್ನು ವೈಭವೀಕರಿಸುತ್ತಿವೆ. ಪತ್ರಿಕೋದ್ಯಮ ಮತ್ತು ಜನತಂತ್ರ ಎರಡು ಒಂದೇ ತಾಯಿಯ ಕರುಳು ಬಳ್ಳಿಗಳು. ಅದು ತಾಯಿ ಮತ್ತು ಮಗುವಿನ ಸಂಬಂಧವಿದ್ದಂತೆ. ಮಹತ್ವದ ಸುದ್ದಿಗಳ ಬಗ್ಗೆ ವಿಚಿತ್ರ ಮೌನ, ರೋಗ ಬಡಿದಂತೆ ಇರುವುದು ಸರಿಯಲ್ಲ ಎಂದು ಪತ್ರಕರ್ತ ಡಿ.ಉಮಾಪತಿ ವಿಷಾದಿಸಿದರು.
ಜಿಲ್ಲೆಯ 10 ಪತ್ರಕರ್ತರಿಗೆ ಪ್ರಶಸ್ತಿ: ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಜಿಲ್ಲಾ ಸಂಘ, ಬೆಂ.ಉತ್ತರ ವಿವಿಯ ಪತ್ರಿಕೋದ್ಯಮ ವಿಭಾಗ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ದಿ.ಕೆ.ಆರ್.ಕೃಷ್ಣಸ್ವಾಮಿ ನೆನಪಿನಲ್ಲಿ ಸಾಕ್ಷಿ ತೆಲುಗು ದೈನಿಕದ ವರದಿಗಾರ ಡಿ.ಎಸ್.ಮಂಜುನಾಥ್, ಜಿ.ನಾರಾಯಣಸ್ವಾಮಿ ನೆನಪಿನಲ್ಲಿ ಕೆಜಿಎಫ್‌ನ ಸುವರ್ಣ ಟೈಮ್ಸ್ ಆಫ್ ಕರ್ನಾಟಕ ತಾಲೂಕು ವರದಿಗಾರ ಶ್ರೀಧರ್ ಫಿಳೈ, ಬಿ.ವಿ.ನರಸಿಂಹಮೂರ್ತಿ ನೆನಪಿನಲ್ಲಿ ಕೋಲಾರ ಕಿರಣ ಸ್ಥಳೀಯ ಪತ್ರಿಕೆ ಸಂಪಾದಕ ಎಂ.ಡಿ.ಚಾಂದ್‌ಪಾಷ, ಎಂ.ಮಲ್ಲೇಶ್ ನೆನಪಿನಲ್ಲಿ ವಿಜಯಕರ್ನಾಟಕ ಜಿಲ್ಲಾ ವರದಿಗಾರ ವೆಂ.ಸುನೀಲ್‌ಕುವಾರ್, ಬಿ.ಎನ್.ಗುರುಪ್ರಸಾದ್ ನೆನಪಿನಲ್ಲಿ ಮುಳಬಾಗಿಲಿನ ವಿಜಯಕರ್ನಾಟಕ ತಾಲೂಕು ವರದಿಗಾರ ಪ್ರಕಾಶ, ಎಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ ಬಂಗಾರಪೇಟೆಯ ವಿಜಯವಾಣಿ ಗ್ರಾವಾಂತರ ವರದಿಗಾರ ಜಿ.ನಾಗರಾಜ್, ಬಿ.ಆರ್ಮುಗಂ ನೆನಪಿನಲ್ಲಿ ಕೋಲಾರದ ನ್ಯೂಸ್ 18ಕನ್ನಡ ಜಿಲ್ಲಾ ವರದಿಗಾರ ಜಿ.ರಘುರಾಜ್, ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿ ಶ್ರೀನಿವಾಸಪುರದ ಅಂತರಗಂಗೆ ತಾಲೂಕು ವರದಿಗಾರ ಆರ್.ಬಾಬು, ವಿ.ಎಂ.ನಾಗಪ್ಪ ಅವರ ನೆನಪಿನಲ್ಲಿ ಕೋಲಾರಪ್ರಭ ಜಿಲ್ಲಾ ವರದಿಗಾರ ಕೆ.ಎಸ್.ಸುದರ್ಶನ್‌ರನ್ನು ಸನ್ಮಾನಿಸಲಾಯಿತು.