ನ್ಯೂಸ್

ಸಮಾಜದ ಅಂಕುಡೊಂಕು ತಿದ್ದುವುದೇ ಪತ್ರಿಕೋದ್ಯಮದ ಕಾರ್ಯ; ಅರುಣಕುಮಾರ ಹಬ್ಬು

ರಾಣೆಬೆನ್ನೂರ: ಪತ್ರಿಕಾ ಮಾಧ್ಯಮದ ಸಮಾಜದ ಅಂಕುಡೊಂಕು ತಿದ್ದುವ ಜತೆಗೆ ಜ್ಞಾನ ಹಂಚಿಕೆ ಮತ್ತು ನೀತಿ ಪಾಠ ಕಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಮಾಜವನ್ನು ಬಡಿದೆಬ್ಬಿಸುವ ಕಾರ್ಯದ ಮಾಡುವ ಮೂಲಕ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಬಹುಮುಖ್ಯ ಪಾತ್ರ ವಹಿಸಿದ್ದು, ಪತ್ರಿಕಾ ಮಾಧ್ಯಮವಾಗಿದೆ ಎಂದು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಹೇಳಿದರು.
ನಗರದ ಚರ್ಚ್​ ರಸ್ತೆಯ ಎಸ್​ಜೆಎಂವಿ ಪದವಿ ಮಹಿಳಾ ಮಹಾವಿದ್ಯಾಲಯದ ಡಾ. ಶಿ.ಮು.ಶ ಸಭಾಭವನದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ತಾಲೂಕು ಟಕದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪತ್ರಕರ್ತರು ಸಮಾಜದ ಒಂದು ಅಂಗವಾಗಿದ್ದು ಪ್ರಜೆಗಳ ರಣೆ ಕಾರ್ಯ ನಿರ್ವಹಿಸುತ್ತಾರೆ. ಯುವ ಜನಾಂಗ ಕೇವಲ ಮನರಂಜನೆಗೆ ಒತ್ತು ನೀಡದೆ ಜೀವನ ರೂಪಿಸುವ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ನಿಮ್ಮ ಜ್ಞಾನ ವೃದ್ಧಿ ಜತೆಗೆ ಪ್ರಚಲಿತ ಟನೆಗಳ ಬಗ್ಗೆ ಅರಿವು ಮೂಡಲಿದೆ. ಸೈಬರ್​ ಕೆಂ ನಂತಹ ಪ್ರಕರಣದ ಬಗ್ಗೆ ಜಾಗೃತಿ ವಹಿಸಲು ಪತ್ರಿಕೆಗಳನ್ನು ಓದಿ ತಿಳಿಯಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ಡಿವೈಎಸ್​ಪಿ ಡಾ. ಗಿರೀಶ ಭೋಜಣ್ಣನವರ ಮಾತನಾಡಿ, ಪ್ರಸ್ತುತ ಕಾಲಟ್ಟದಲ್ಲಿ ಸಮಾಜಕ್ಕೆ ಮುದ್ರಣ ಮಾಧ್ಯಮದ ಕೊಡುಗೆ ಅಪಾರವಾಗಿದೆ. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಿಂದಾಗಿ ಪತ್ರಿಕೆಗಳನ್ನು ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಮಾತನಾಡಿ, ಪತ್ರಿಕೋದ್ಯಮ ೇತ್ರದಲ್ಲಿ ಬದಲಾವಣೆ ಪರ್ವ ಪ್ರಾರಂಭವಾಗಿದ್ದು ಸಾಮಾಜಿಕ ಚಿಂತನೆ ದೂರವಾಗಿದೆ. ಇದರಿಂದ ಪತ್ರಕರ್ತರ ಕಾರ್ಯಶೈಲಿ ಮೇಲೆ ಪರಿಣಾಮ ಉಂಟಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಹೊಂದಿದ ಪತ್ರಕರ್ತರು ಸಂಕಷ್ಟ ಎದುರಿಸಬೇಕಾಗಿದೆ ಎಂದರು.
ತಾಲೂಕ ಕಾನಿಪ ಸಂದ ಅಧ್ಯ ಎಸ್​.ಟಿ.ವೇದಮೂತಿರ್ ಅಧ್ಯತೆ ವಹಿಸಿದ್ದರು. ಶಹರ ಸಿಪಿಐ ಡಾ. ಶಂಕರ ಸೈಬರ್​ ಅಪರಾಧ ಹಾಗೂ ಸಾಮಾಜಿಕ ಜಾಲತಾಣಗಳ ಕುರಿತು ಉಪನ್ಯಾಸ ನೀಡಿದರು. ಪಿ.ರಾಮಯ್ಯ ಪ್ರಶಸ್ತಿ ಪುರಸತ ಸ್ಥಳಿಯ ಪತ್ರಕರ್ತ ಮನೋಹರ ಮಲ್ಲಾಡದ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ರಾಜ್ಯ ಉಪಾಧ್ಯ ಡಾ. ಬಸವರಾಜ ಕೇಲಗಾರ, ಜೆಡಿಎಸ್​ ಜಿಲ್ಲಾಧ್ಯ ಮಂಜುನಾಥ ಗೌಡಶಿವಣ್ಣನವರ, ಎಸ್​.ಜೆ.ಎಂ.ವಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್​.ವಿ. ಹೆಗಡಾಳ, ಕಾನಿಪ ರಾಜ್ಯ ಕಾರ್ಯದಶಿರ್ ನಿಂಗಪ್ಪ ಚಾವಡಿ, ಜಿಲ್ಲಾಧ್ಯ ನಾಗರಾಜ ಕುರುವತ್ತೇರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪರಸಪ್ಪ ಸತ್ಯಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದಶಿರ್ ವೀರೇಶ ಮಡ್ಲೂರ, ಜಿಲ್ಲಾ ಕಾರ್ಯದಶಿರ್ ಸಂತೋಷಕುಮಾರ ಮಹಾಂತಶೆಟ್ಟರ, ಜಿಲ್ಲಾ ಉಪಾಧ್ಯ ಎಸ್​.ಜಿ. ಮಹಾನುಭಾವಿಮಠ, ಎಸ್​ಟಿಜೆಐಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಈ. ಶಿವಕುಮಾರ ಹೊನ್ನಾಳಿ ಅತಿಥಿಗಳಾಗಿ ಆಗಮಿಸಿದ್ದರು.
ತಾಲೂಕು ಸಂದ ಉಪಾಧ್ಯಕ್ಷ ಕರಿಯಪ್ಪ ಅರಳಿಕಟ್ಟಿ, ಕಾರ್ಯದಶಿರ್ ಮಂಜುನಾಥ ಹೊಸಪೇಟಿ, ಖಜಾಂಚಿ ಗುರುರಾಜ ನಾಡಿಗೇರ, ಪ್ರಮುಖರಾದ ಕೆ.ಎಸ್​. ನಾಗರಾಜ, ಮುರುಗೇಶ ಮಹಾನುಭಾವಿಮಠ, ಮುಕ್ತೇಶ ಕೂರಗುಂದಮಠ, ಮಾಣಿಕಲಾಲ್​ ಮೆಹರವಾಡೆ, ಬಸವರಾಜ ಸರೂರ, ಸುಮಿತ್​ ಮಳಿಯೆ, ಗಿರೀಶ ಅಮ್ಮನವರ ಹಾಗೂ ಸಂದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.