ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲೂೃಜೆ) ಅಗಲಿದ ಹಿರಿಯ ಪತ್ರಕರ್ತರಾದ ಪದ್ಮ ವಿಭೂಷಣ ಪುರಸ್ಕೃತರಾದ ರಾಮೋಜಿ ರಾವ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮತ್ತಿಹಳ್ಳಿ ಮದನ ಮೋಹನ್ ಅವರುಗಳಿಗೆ ಜೂನ್ 19ರಂದು ಬುಧವಾರ ಬೆಳಿಗ್ಗೆ 11ಕ್ಕೆ ಕಂದಾಯ ಭವನದ ಕೆಯುಡಬ್ಲೂೃಜೆ ಸಭಾಂಗಣದಲ್ಲಿ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅವಧಿ ಸಂಪಾದಕ ಜಿ.ಎನ್.ಮೋಹನ್, ನ್ಯೂಸ್ ಸ್ಟ್ ಎಂಡಿ ಮತ್ತು ಸಿಇಒ ಎಸ್.ರವಿಕುಮಾರ್, ದ ೆಡರಲ್ ಕನ್ನಡ ಮುಖ್ಯಸ್ಥ ಮುರಳೀಧರ ಖಜಾನೆ ಅವರುಗಳು ಶ್ರದ್ದಾಂಜಲಿ ನುಡಿಗಳನ್ನಾಡಲಿದ್ದು, ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ.