ನ್ಯೂಸ್

ಮುಖ್ಯಮಂತ್ರಿ ಸಮಕ್ಷಮ ಜಂಟಿ ಉದ್ಯಮ ಒಪ್ಪಂದ | Investment in aerospace industry

ಬೆಂಗಳೂರು: ರಾಜ್ಯದ ಡಿಸಿಎಕ್ಸ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಇಸ್ರೇಲ್ ಮೂಲದ ಐಎಐ ಎಲ್ಟಾ ಕಂಪನಿ ಜಂಟಿಯಾಗಿ ವೈಮಾನಿಕ ಕ್ಷೇತ್ರದ ಉದ್ಯಮ ಸ್ಥಾಪಿಸಲು ನಿರ್ಧರಿಸಿವೆ. ರ್ತು ವಹಿವಾಟಿಗೆ ಸೀಮಿತವಾಗಿದ್ದ ಎರಡೂ ಕಂಪನಿಗಳ ಸಂಬಂಧ ಪರಸ್ಪರ ಹೂಡಿಕೆ ಹಂತಕ್ಕೆ ವಿಸ್ತರಿಸಿದೆ.

ವಿಧಾನಸೌಧದ ಮುಖ್ಯಮಂತ್ರಿ ಕೊಠಡಿಯಲ್ಲಿ ಸಿಎಂ ಸಿದ್ದರಾಮಯ್ಯ ಸಮಕ್ಷಮ ಎರಡು ಕಂಪನಿಗಳು ಜಂಟಿ ಉದ್ಯಮ ಒಪ್ಪಂದಕ್ಕೆ ಸಹಿ ಹಾಕಿದವು. ಪರಸ್ಪರ ಒಪ್ಪಂದ ಪತ್ರಗಳನ್ನು ಸಿದ್ದರಾಮಯ್ಯ ಕೈಯಿಂದ ಹಸ್ತಾಂತರಿಸಿಕೊಂಡರು.

ಎರಡೂ ಕಂಪನಿಗಳು ರಾಜ್ಯದಲ್ಲಿ 800 ಕೋಟಿ ರೂ. ಬಂಡವಾಳ ಹೂಡಲಿದ್ದು, ನೇರ ಹಾಗೂ ಪರೋಕ್ಷವಾಗಿ ತಲಾ 500 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್ ಉದ್ಯಮ ಬಡಾವಣೆಯಲ್ಲಿ ಮುಂದಿನ ನಾಲ್ಕೈದು ತಿಂಗಳಲ್ಲಿ ಜಂಟಿ ಉದ್ಯಮ ಸ್ಥಾಪನೆ ಚಟುವಟಿಕೆ ಶುರುವಾಗಲಿವೆ.

ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರದ ಉದ್ಯಮಯಿದಾಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಪಟ್ಟಿಯಲ್ಲಿರುವ ಡಿಸಿಎಕ್ಸ್ ಸಿಸ್ಟಮ್ಸ್ ಕಂಪನಿಯು ಕಳೆದ ವರ್ಷ 1,450 ಕೋಟಿ ರೂ.ಗಳ ವಹಿವಾಟು ನಡೆಸಿದೆ.

ಉದ್ಯಮ-ವಹಿವಾಟು ವಿಸ್ತರಣೆ

ಇಸ್ರೇಲ್ ಮೂಲದ ಕಂಪನಿಯೊಂದಿಗೆ ಶೇಕಡ 70 ರಿಂದ 80ರಷ್ಟು ವಹಿವಾಟು ಒಡನಾಟ ಇಟ್ಟುಕೊಂಡಿದೆ. ಕೆಐಎಡಿಬಿ ಅಭಿವೃದ್ಧಿಪಡಿಸಿದ ವಿಧೇಷ ಆರ್ಥಿಕ ವಲಯದಲ್ಲಿ ಉದ್ಯಮದ ಘಟಕ ಹೊಂದಿದೆ.

ವಿವಿಧ ದೇಶಗಳ ತಂತ್ರಜ್ಞಾನ ಆಮದು ಮಾಡಿಕೊಂಡು ರಾಜ್ಯದಲ್ಲಿಯೇ ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರಕ್ಕೆ ಅಗತ್ಯವಿರುವ ಸಾಧನ-ಸಲಕರಣೆಗಳನ್ನು ತಯಾರಿಸಿ ರಪ್ತು ಮಾಡುತ್ತಿದೆ. ಜಂಟಿ ಉದ್ಯಮ ಸ್ಥಾಪನೆ ಒಡಂಬಡಿಕೆಯು ವಹಿವಾಟು ಗಾತ್ರ ಹೆಚ್ಚಿಸುವ ಜತೆಗೆ ರಾಜ್ಯದ ಅರ್ಹ, ಪ್ರತಿಭಾವಂತ ಯುವಜನರ ಕೈಗೆ ಉದ್ಯೋಗಾವಕಾಶಗಳನ್ನು ನೀಡಲಿದೆ.

ಜಂಟಿ ಉದ್ಯಮ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರಾಜ್ಯದ ಡಿಸಿಎಕ್ಸ್ ಸಿಸ್ಟಮ್ಸ್ ಲಿಮಿಟೆಡ್‌ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ, ಡಾ.ಎಚ್.ಎಸ್.ರಾಘವೇಂದ್ರರಾವ್, ಇಸ್ರೇಲ್‌ನ ಐಎಐ ಎಲ್ಟಾ ಕಂಪನಿ ಪ್ರಮುಖರು ಇದ್ದರು.