ನ್ಯೂಸ್

25 ವರ್ಷಗಳಿಂದ ಸಿಹಿಯನ್ನು ತಿಂದೇ ಇಲ್ಲ ಸ್ಟಾರ್​ ನಟ! ಕಾರಣವೇನು ಗೊತ್ತಾ?...John Abraham

ಮುಂಬೈ: ಬಾಲಿವುಡ್​​ ನಟ ಜಾನ್ ಅಬ್ರಹಾಂ ( John Abraham )  ಅವರಿಗೆ ಈಗ 52 ವರ್ಷ ವಯಸ್ಸು. ಈಗಲೂ ಫಿಟ್ನೆಸ್ ಬಗ್ಗೆ ಗಮನ ನೀಡುವ ಅವರು, ಇದಕ್ಕೆ ತಕ್ಕಂತೆ ಆಹಾರ ಕ್ರಮ ಫಾಲೋ ಮಾಡುತ್ತಾರೆ. ಕಳೆದ 25 ವರ್ಷಗಳಿಂದ ಸಿಹಿಯನ್ನು ತಿಂದೇ ಇಲ್ಲವಂತೆ ಇವರು. ಈ ಸುದ್ದಿ ಈಗ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ನಟಿ ಆಲಿ ಖಾನ್  ಮಾತನಾಡಿ. ‘ಜಾನ್ ಅಬ್ರಹಾಂ ಅವರು  ಸಖತ್ ಫಿಟ್ ಆಗಿದ್ದಾರೆ. ಅದಕ್ಕೆ ಕಾರಣ ಅವರು ಕಳೆದ 25 ವರ್ಷಗಳಿಂದ ಸಿಹಿ ಪದಾರ್ಥ ಸೇವನೆ ಮಾಡೇ ಇಲ್ಲ, ಸಿಗ್ರೇಟ್​​, ಕುಡಿತ ಯಾವುದು ಮಾಡುವುದಿಲ್ಲ' ಎಂದಿದ್ದಾರೆ .

ಜಾನ್ ಅಬ್ರಹಾಂ ಅವರು ಇಷ್ಟೊಂದು ಒಳ್ಳೆಯ ಬಾಡಿ ಮಾಡಿದ್ದಾರೆ ಎಂದ ಮಾತ್ರಕ್ಕೆ ಅವರು ನಾನ್​ವೆಜ್ ತಿನ್ನುತ್ತಾರೆ ಎಂದು ಎಲ್ಲರೂ ಅಂದುಕೊಳ್ಳಬಹುದು. ಆದರೆ, ಅದು ಸುಳ್ಳು. ಅವರು ಪಕ್ಕಾ ಸಸ್ಯಾಹಾರಿ. ಸಸ್ಯಾಹಾರ ಸೇವನೆಯಿಂದ ಇಷ್ಟು ಒಳ್ಳೆಯ ಬಾಡಿ ಮಾಡಿದ್ದಾರೆ.

ಬಾಲಿವುಡ್​ನಲ್ಲಿ ವಿಲನ್ ಆಗಿಯೂ ಹೆಸರು ಮಾಡಿದ್ದಾರೆ. ಅವರ ಜನಪ್ರಿಯತೆ ಹೆಚ್ಚುತ್ತಿದೆ.  ಅವರ ನಟನೆಯ ‘ವೇದ’ ಇತ್ತೀಚೆಗೆ ರಿಲೀಸ್ ಆಗಿ ಸಾಧಾರಣ ಗೆಲುವು ಕಂಡಿತು.

ಸಿಹಿ ಪದಾರ್ಥ ತಿನ್ನದಿದ್ದರೆ ಡಯಾಬಿಟಿಸ್​ನಿಂದ ದೂರ ಇರಬಹುದು. ದೇಹದ ತೂಕದಲ್ಲಿ ಇಳಿಕೆ ಆಗುತ್ತದೆ. ಕೊಲೆಸ್ಟ್ರಾಲ್ ಲೆವೆಲನ್​ ನಿಯಂತ್ರಣದಲ್ಲಿ ಇಡಬಹುದು. ಕೊಲೆಸ್ಟ್ರಾಲ್ ಇಲ್ಲ ಎಂದರೆ ಹೃದಯದ ಸಮಸ್ಯೆ ಇಲ್ಲ. ಹೊಟ್ಟೆಯ ಆರೋಗ್ಯವೂ ಉತ್ತಮವಾಗಿರುತ್ತದೆ  ಎನ್ನಲಾಗಿದೆ.