ಹಳ್ಳೂರ: ಸಮೀಪದ ಶಿವಾಪುರ(ಹ) ಗ್ರಾಮದಲ್ಲಿ ಜೋಗುಳಬಾವಿ ಸತ್ಯಮ್ಮದೇವಿಯ ಮಂದಿರ ಲೋಕಾರ್ಪಣೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಮಂಗಳವಾರ ನೆರವೇರಿತು.
ಮುಖಂಡ ಸರ್ವೋತ್ತಮ ಜಾರಕಿಹೊಳಿ ಮಂದಿರ ಉದ್ಘಾಟಿಸಿದರು. ಕೊಣ್ಣೂರ-ಮರಡಿಮಠದ ಪವಾಡೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಮುತ್ತೈದೆಯರಿಂದ ಆರತಿಮೇಳ, ಕುಂಭಮೇಳ, ಸತ್ಯಮ್ಮ ಮೂರ್ತಿ ಮೆರವಣಿಗೆ ಜರುಗಿತು. ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಸಮಾರಂಭ, ಭಜನೆ, ಪದಗಳು ಜರುಗಿದವು. ಜಾತ್ರೆಯು ಸಡಗರ ಸಂಭ್ರಮದಿಂದ ತುಂಬಿತ್ತು.