ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆ (ಕೆಎಲ್ಡಿ)ಯ ವತಿಯಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಇದರ ಅನ್ವಯ ಅರಣ್ಯ ವೀಕ್ಷಲ (ಫಾರೆಸ್ಟ್ ವಾಚರ್) ಹುದ್ದೆಗಳಿಗೆ ನೇಮಕಾತಿ ನಡೆಯಲಿವೆ. ಆಸಕ್ತ ಅಭ್ಯರ್ಥಿಗಳು ಇಲ್ಲಿ ನೀಡಲಾದ ಮಾಹಿತಿಗಳ ಅನುಸಾರ ಅರ್ಜಿ ಸಲ್ಲಿಸಬಹುದು.
ಒಟ್ಟು 310 ಅರಣ್ಯ ವೀಕ ಹುದ್ದೆಗಳಿವೆ.
ಶೈಣಿಕ : ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿ ಎಸ್ಎಸ್ಎಲ್ಸಿ ಅಥವಾ ಪಿಯುಸಿ ತೇರ್ಗಡೆಯಾಗಿರಬೇಕು.
ವಯೋಮಿತಿ: ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕಿದ್ದು, 35 ವರ್ಷದೊಳಗಿರುವ ಸಾಮಾನ್ಯ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು. 2ಎ, 2ಬಿ, 3ಎ,3ಬಿ ಹಾಗೂ ಒಬಿಸಿಗಳಿಗೆ 3 ವರ್ಷ, ಎಸ್ಸಿ,ಎಸ್ಟಿಗಳಿಗೆ 5 ವರ್ಷ ವಿನಾಯಿತಿ ನೀಡಲಾಗಿದೆ.
ಸಾಮಾನ್ಯ ಅಭ್ಯರ್ಥಿಯು 125 ರೂ. ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 45ರೂ. ನಿಗದಿಪಡಿಸಲಾಗಿದೆ. ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕಿಯ ಮತೆ ತಪಾಸಣೆ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ: ಅರಣ್ಯ ವೀಕ್ಷಕನಾಗಿ ಆಯ್ಕೆಯಾದವರಿಗೆ ಪ್ರತಿ ತಿಂಗಳು 21,400 ರೂ.ನಿಂದ 42,000 ರೂ. ವೇತನ ನೀಡಲಾಗುತ್ತದೆ.
ಅರಣ್ಯ ವೀಕ್ಷಕನು ಅರಣ್ಯದೊಳಗೆ ಅಕ್ರಮವಾಗಿ ನುಸುಳಿ ಬೇಟೆಯಾಡುವಿಕೆ ಕುರಿತು ನಿಗಾ ವಹಿಸಬೇಕಿದ್ದು, ಇದರೊಂದಿಗೆ ಮರದ ದಿಮ್ಮಿಗಳ ಹಾಗೂ ಪ್ರಾಣಿಗಳ ಸ್ಮಗ್ಲಿಂಗ್ ನಡೆಯದಂತೆ ನಿಗಾವಹಿಸಬೇಕು. ಇದರೊಂದಿಗೆ ಅರಣ್ಯ ಸಂಪತ್ತನ್ನು ರಕ್ಷಿಸುವಲ್ಲಿ ಅರಣ್ಯ ವೀಕ್ಷಕನ ಕಾರ್ಯ ಮಹತ್ತರವಾಗಿರುತ್ತದೆ.